ಉದಯವಾಹಿನಿ,ಕೆಂಗೇರಿ: ಜಾತಿ, ಧರ್ಮದ ಹೆಸರಿನಲ್ಲಿ ವಿಷ ಬೀಜವನ್ನು ಬಿತ್ತಿ ಮನುಷ್ಯ ಮನುಷ್ಯರ ನಡುವೆ ಸಮಾಜದಲ್ಲಿ ಕಂದಕವನ್ನು ನಿರ್ಮಿಸುತ್ತಿರುವ ಬಿಜೆಪಿಗರ ಸುಳ್ಳನ್ನು ಯಾರು ನಂಬಬಾರದೆಂದು ಮಾಜಿ ಶಾಸಕಿ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಕೆ.ಪೂರ್ಣಿಮಾ ಶ್ರೀನಿವಾಸ್ ಮನವಿಮಾಡಿದರು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಬೆಂಗಳೂರು ಪಶ್ಚಿಮ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳಾಗಿ ಆಯ್ಕೆಯಾದವರಿಗೆ ಅಭಿನಂದಿಸಿ ಮಾತನಾಡಿ,. ಸಾವಿರಾರು ಕೋಟಿ ಉದ್ಯಮಿಗಳಿಂದ ಪಕ್ಷದ ಹೆಸರಿನಲ್ಲಿ ಪಂಡ್ ಪಡೆದು ಚುನಾವಣೆ ನಡೆಸಿ ಗೋಲ್ಮಾಲ್ ನಡೆಸುತ್ತಿದ್ದರೂ. ಪ್ರಜ್ಞಾವಂತರು ಮೌನವಹಿಸಿರುವುದು ಅವರಿಗೆ ವರದಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಮಾತನಾಡಿ ಒಬ್ಬ ಸ್ತ್ರೀಪೀಡಕ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ದ ನ್ಯಾಯಕ್ಕಾಗಿ ಆಗ್ರಹಿಸಿ ಹೋರಾಟ ನಡೆಸಲು ದೃಢ ಸಂಕಲ್ಪ ಮಾಡಲಾಗಿದೆ ಎಂದರು. ಚುನಾವಣಾ ರಾಜಕೀಯದಲ್ಲಿ ಏರುಪೇರು ಎದುರಾದರೂ ಎದೆಗುಂದದೆ ಜನರ ಹಿತಕ್ಕಾಗಿ ಸ್ವಾಭಿಮಾನದಿಂದ ಅವರ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಕಾರ್ಯಕರ್ತರು ಹಾಗೂ ಮುಖಂಡರಿಗೆ ನಿಗಮ ಮಂಡಳಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸದೆ ಇರುವುದಕ್ಕೆ ಕಾರ್ಯಕರ್ತರು,ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು,

Leave a Reply

Your email address will not be published. Required fields are marked *

error: Content is protected !!