ಉದಯವಾಹಿನಿ, ಕೆಂಗೇರಿ: ಸಮಾಜದಲ್ಲಿ ಹೃದಯವಂತಿಕೆ, ಶ್ರೀಮಂತಿಕೆಯಿರುವ ವ್ಯಕ್ತಿಗಳಿಂದ ಮಾತ್ರ ಸರ್ವಜನಾಂಗದ ಅಭಿವೃದ್ದಿ ಬಡವರ, ನೊಂದವರ, ಶ್ರಮಿಕರ ಸೇವೆ ಮಾಡಲು, ಸಾಧ್ಯವಾಗಿದೆ ಅಂತಹ ಪುಣ್ಯದ ಕೆಲಸವನ್ನು ಲಗ್ಗೆರೆ ಅರ್ಪಿತಾ ಸೇವಾ ಟ್ರಸ್ಟ್ ಮುಂಚೂಣಿಯಲ್ಲಿದೆ ಎಂದು ಕೂಡಲು ಸಂಗಮ ವೀರಶೈವ ಲಿಂಗಾಯತ ಮಠದ ಜಯಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದರು.
ಲಗ್ಗೆರೆಯಲ್ಲಿ ಅರ್ಪಿತಾ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಚಿನ್ನರ ಅಂಗಳ ಬೃಹತ್ ಬೇಸಿಗೆ ಶಿಬಿರ ಕ್ರಿಕೆಟ್, ಕುದುರೆ ಸವಾರಿ, ಈಜು ಕಲಿಕೆ, ಸ್ಕೇಟಿಂಗ್, ಬಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಸಮರ ಕಲೆಗಳು, ಕುಶಲ-ಕೌಸಲ್ಯಗಳು, ಯಕ್ಷಗಾನ ಇನ್ನಿತರೆ ಕಲೆಗಳ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದ ಅವರು ಸಿರಿವಂತಿಕೆಯುಳ್ಳವರೆಲ್ಲರೂ ಬಡವರ ಸೇವೆ ಮಾಡುವುದಿಲ್ಲ, ಯಾರಲ್ಲಿ ಬಡವರ, ನೊಂದವರ ಬಗೆ ಚಿಂತನೆ ಇರುತ್ತದೆಯೋ ಅಂತಹ ಜನಪ್ರತಿನಿಧಿಗಳು, ಶ್ರಮಜೀವಿಗಳು, ಸಮಾಜ ಮುಖಿ ಚಿಂತನೆಯುಳ್ಳವರಿಂದ ಮಾತ್ರ ಸಮಾಜದ ಪ್ರಗತಿಕಾಣಬಹುದು ಆ ಸಾಲಿನಲ್ಲಿ ಲಗ್ಗೆರೆನಾರಾಯಣಸ್ವಾಮಿ ಕುಟುಂಬ ಮುಂಚೂಣಿಯಲ್ಲಿದ್ದಾರೆ, ಅವರು ಜಾತಿ, ಧರ್ಮಮೀರಿ, ಅಂದರು, ಅನಾಥಮಕ್ಕಳನ್ನು ದತ್ತು ಪಡೆದು, ಸಾವಿರಾರು ಬಡಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವ ಕಾಯ ಶ್ಲಾಘನೀಯ ಎಂದು ಬಣ್ಣಿಸಿದರು.
ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಮಾತನಾಡಿ ಅರ್ಪಿತಾ ಸೇವಾ ಟ್ರಸ್ಟ್ನವರು ಎಂದಿಗೂ ಪ್ರಚಾರ ಬಯಸದೆ ಬಡವರ, ನೊಂದವರ, ಬಡಕಾರ್ಮಿಕರ, ಎಲ್ಲ ಜನಾಂಗ, ಧರ್ಮದ ಸೇವೆ ಮಾಡುತ್ತಿದ್ದಾರೆ ಎಂದಿಗೂ ಸಹ ನನ್ನಿಂದ ಸೇವೆ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವುದಿಲ್ಲ ಎಂದರು. ಅರ್ಪಿತಾ ಸೇವಾ ಟ್ರಸ್ಟ್ನ ಅಧ್ಯಕ್ಷ ಲಗ್ಗೆರೆ ನಾರಾಯಣಸ್ವಾಮಿ ಮಾತನಾಡಿ ಹುಟ್ಟು ಆಕಸ್ಮಿಕ, ಸಾವು ಖಚಿತ ಭಗವಂತ ಈ ಭೂಮಿಗೆ ಕಳುಹಿಸಿ ಎಲ್ಲ ಬಡವರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಜನರ ಸೇವೆ ಮಾಡುವ ಮೂಲಕ ದೇವರನ್ನು ಕಾಣುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ಪಾಲಿಕೆ ಮಾಜಿ ಸದಸ್ಯರಾದ ಎಚ್.ಎಸ್.ಸಿದ್ದೇಗೌಡ, ಮಂಜುಳನಾರಾಯಣಸ್ವಾಮಿ, ಬಿ.ಆರ್.ನಂಜುಂಡಪ್ಪ, ವೇಲುನಾಯಕರ್, ಮೋಹನ್ ಕುಮಾರ್, ಮಾತನಾಡಿದರು.

Leave a Reply

Your email address will not be published. Required fields are marked *

error: Content is protected !!