ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ದಲಿತ ಸಂಘಟನೆಗಳ ಮನವಿಗೆ ಸ್ಪಂದಿಸಿ ಒಳ ಮೀಸಲಾತಿಯನ್ನು ಅತೀ ಶೀಘ್ರದಲ್ಲೇ ಜಾರಿತರಬೇಕು.ನ್ಯಾಯಮೂರ್ತಿ ನ್ಯಾಗಮೋಹನ್ ದಾಸ್ ಒಳ ಮೀಸಲಾತಿ ಜಾರಿ ಕುರಿತ ವರದಿ ಸಲ್ಲಿಸಿದ್ದು.ಯಾರಿಗೂ ಅನ್ಯಾಯವಾಗದಂತೆ ವರದಿಯನ್ನು ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದೊಳಗೆ ಜಾರಿಗೊಳಿಸಬೇಕು ಅಹಿಂದ ಹೋರಾಟ ಸಮಿತಿ ಅಧ್ಯಕ್ಷ ಮುತ್ತುರಾಜ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಮಾದಿಗ ದಂಡೋರ ಸಮಿತಿಯ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಒಳ ಮೀಸಲಾತಿ ವರದಿ ಜಾರಿಯಾಗುವವರೆಗೂ ಬ್ಯಾಕ್ ಲ್ಯಾಗ್ ಹುದ್ದೆಗಳ ಭರ್ತಿ ಕುರಿತು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು.ಒಳ ಮೀಸಲಾತಿ ನಿಗದಿತ ಅವಧಿಯೊಳಗೆ ಜಾರಿತರದಿದ್ದರೆ ಮಂದ ಕೃಷ್ಣ ನೇತೃತ್ವದಲ್ಲಿ ರಾಜ್ಯ ವಿವಿಧೆಡೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಮಾದಿಗ ದಂಡೋರ ರಾಜ್ಯಾಧ್ಯಕ್ಷ ನರಸಪ್ಪ ಮಾತನಾಡಿ, ಭಾರತೀಯ ಯೋಜನಾ ಆಯೋಗದ ನಿಯಮಗಳ ಅನುಸಾರ ಎಸ್ ಸಿ ಪಿ ಟಿಎಸ್ ಪಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಯಾವು ದೇ ಕಾರಣಕ್ಕೂ ಎಸ್ ಸಿ ಟಿಎಸ್ ಪಿ ನಿಧಿಯನ್ನು ಗ್ಯಾರಂಟಿ ಯೋಜನೆ ಅಥವಾ ಬೇರೆ ಯಾವುದೇ ಉದ್ದೇಶಗಳಿಗೆ ಬಳಸಬಾರದು. ಮುಖ್ಯಮಂತ್ರಿ ಸಿದ್ಧರಾಮಯ್ಯ ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿ ಬ್ಯಾಕ್ ಲ್ಯಾಗ್ ಹುದ್ದೆಗಳ ಭರ್ತಿ ಕುರಿತು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಮಾದಿಗ ದಂಡೋರ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾತನಾಡಿ, ಸಮಾಜಿಕ ನ್ಯಾಯಕ್ಕಾಗಿ ಮೂವತ್ತು ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಮತ್ತು ಸುಪ್ರೀಂಕೋರ್ಟ್ ತೀರ್ಪಿಗೆ ಮನ್ನಣೆ ನೀಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದಿಂದ ಮಧ್ಯಂತರ ವರದಿ ತರಿಸಿ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳಿಗೆ ಶೇ ೬ರಷ್ಟು ಒಳ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕು.
