ಉದಯವಾಹಿನಿ, ಕಲಬುರಗಿ: ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಕಾಲಭೈರವ 16 ನೇ
ಜಾತ್ರಾ ಮಹೋತ್ಸವ ಯುಗಾದಿ ಹಬ್ಬದ ದಿನದಂದು ಆರಂಭವಾಗಿದ್ದು, ಇದೇ ಬರುವ ಎಪ್ರಿಲ್ 7 ರಂದು ಸಂಜೆ 6ಕ್ಕೆ ಮಹಾರಥೋತ್ಸವ ಜರುಗಲಿದೆ.
ಜಾತ್ರಾ ಮಹೋತ್ಸವವು ನಾಡಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಜರುಗಲಿದೆ.
ಜಾತ್ರಾ ಮಹೋತ್ಸವಅಂಗವಾಗಿ ಮಾರ್ಚ 30 ರ ರವಿವಾರ ಯುಗಾದಿ ಹಬ್ಬದ ದಿನದಿಂದ 9 ದಿನಗಳ ಕಾಲ ಏ. 7 ರವರೆಗೆ ಪ್ರತಿನಿತ್ಯ ರಾತ್ರಿ 8.30 ರಿಂದ ರಾತ್ರಿ 10.30ರವರೆಗೆ ಚಿಕ್ಕರೂಗಿಯ ಈರಣ್ಣ ಶಾಸ್ತ್ರೀ ಗಳು ಅವರಿಂದ ಕಡಕೋಳ ಮಡಿವಾಳಪ್ಪ ಅವರ ಕುರಿತಾದ ಪುರಾಣ ಪ್ರವಚನ ನಡೆದು ಬರಲಿದೆ. ಮಹಾಂತೇಶ ನಾಗೋಜಿ, ಜಗದೀಶ ದೇಸಾಯಿ ಕಲ್ಲೂರ ಅವರಿಂದ ಸಂಗೀತ ಹಾಗೂ ತಬಲಾ ಸೇವೆ ನೀಡುವರು.ಏ.6 ರಂದು ಸಾಯಂಕಾಲ 6ಕ್ಕೆ ಉಚ್ಚಾಯಿ ಕಾರ್ಯಕ್ರಮ. ಲಕ್ಷ ದೀಪೋತ್ಸವ ನೆರವೇರುವುದು. ಲಕ್ಷ್ಮೀಪುತ್ರ ಮುತ್ಯಾ ಭಾಸಗಿ ಅವರಿಂದ ಚಾಲನೆ ದೊರೆಯುವುದು. ತದನಂತರ ರಾತ್ರಿ 10ಕ್ಕೆ ಪಟ್ಟದ ಪುರವಂತರಿಂದ ಆಗ್ನಿ ಪುಟು ನಡೆಯುವುದು. ಮರುದಿನ ಏ. 7 ರಂದು ಬೆಳಿಗ್ಗೆ 5ಕ್ಕೆ ಕಾಲಭೈರವ ಹಾಗೂ ರಾಮಲಿಂಗೇಶ್ವರ ಕರ್ತೃ ಗದ್ದುಗೆಗೆ ಮಹಾ
ರುದ್ರಾಭಿಷೇಕ ನಡೆದು ತದನಂತರ ಪುರವಂತರಿಂಎದ ಆಗ್ನಿ ಪ್ರವೇಶ ನಡೆಯುವುದು.
