ಉದಯವಾಹಿನಿ, ಲಕ್ಕುಂಡಿ: ಯುಗಾದಿ ಪ್ರಯುಕ್ತ ಇಲ್ಲಿಯ ಅತ್ತಿಮಬ್ಬೆ ಮಹಾದ್ವಾರದ ಹತ್ತಿರವಿರುವ ಮಾರುತಿ ದೇವರ ಬಣ್ಣದ ಹೊಂಡ ತುಳುಕಿಸುವ ಕಾರ್ಯಕ್ರಮ ಭಾನುವಾರ ನಡೆಯಲಿದೆ.
ಭಾನುವಾರ ಸಂಜೆ 5ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ ನಂತರ ಹೊಂಡ ತುಳುಕಿಸುವ ಕಾರ್ಯಕ್ರಮವು ನಡೆಯಲಿದೆ.
ಇದಕ್ಕೂ ಪೂರ್ವ ಬೆಳಿಗೆ ಮಾರುತಿ ದೇವರಿಗೆ ವಿವಿಧ ಹೂವುಗಳ ಅಲಂಕಾರದೊಂದಿಗೆ ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.
ನಂತರ ಗ್ರಾಮದ ವಿವಿಧ ದೇವಸ್ಥಾನಗಳಿಗೆ ತೆರಳಿ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
