ಉದಯವಾಹಿನಿ, ದಾವಣಗೆರೆ: ನ್ಯಾಮತಿಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳೆದ ಆರು ತಿಂಗಳ ಹಿಂದೆ ನಡೆದಿದ್ದದರೋಡೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರು ಮಂದಿಯನ್ನು ಬಂಧಿಸಿ 15 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ವಿಜಯಕುಮಾರ್(30), ಈತನ ಸಹೋದರ ಅಜಯಕುಮಾರ್ (28), ಇವರ ಭಾವ ಪರಮಾನಂದ(30) ಹಾಗೂ ಸಹಚರರಾದ ಅಭಿಷೇಕ್ (23), ಚಂದ್ರು (23), ಮಂಜುನಾಥ್ (32) ಬಂಧಿತ ಆರೋಪಿಗಳು.
ಕಳೆದ ಅಕ್ಟೋಬರ್ 28 ರಂದು ದಾವಣಗೆರೆ ನ್ಯಾಮತಿ ಎಸ್‌ಬಿಐ ಬ್ಯಾಂಕ್‌ನ ಕಬ್ಬಿಣದ ಕಿಟಕಿಯ ಗ್ರಿಲ್ ಅನ್ನು ಕತ್ತರಿಸಿ ಒಳನುಗ್ಗಿ ಅಲ್ಲಿದ್ದ ಸಿಸಿಟಿವಿ, ಅಲರಾಂ ಮತ್ತು ಎಲ್ಲಾ ವೈರ್ ಗಳನ್ನು ಕತ್ತರಿಸಿ ಕನೆಕ್ಷನ್ ತಪ್ಪಿಸಿದ್ದಾರೆ. ನಂತರ ಅಲ್ಲಿನ ಸ್ಟ್ರಾಂಗ್ ರೂಂನ ಗ್ರಿಲ್ ಡೋರ್‌ಗೆ ಅಳವಡಿಸಿದ್ದ ಬೀಗವನ್ನು ಮುರಿದು ಒಳನುಗ್ಗಿ ನಾಲ್ಕು ಕರೆನ್ಸಿ ಚೆಸ್ಟ್‌ಗಳ ಪೈಕಿ ಒಂದನ್ನು ಗ್ಯಾಸ್ ಕಟ್ಟರ್‌ನಿಂದ ಕೊರೆದು ಲಾಕರ್ ಬಾಗಿಲು ತೆಗೆದು ಅದರಲ್ಲಿ ಸಾರ್ವಜನಿಕರು ಅಡವಿಟ್ಟಿದ್ದ ಸುಮಾರು 17 ಕೆಜಿ ಚಿನ್ನಾಭರಣವನ್ನು ದರೋಡೆ ಮಾಡಿ ಸಾಕ್ಷಿ ನಾಶಪಡಿಸಲು ಎಲ್ಲಾ ಕಡೆ ಖಾರದಪುಡಿಯನ್ನು ಚೆಲ್ಲಿ ಪರಾರಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!