ಉದಯವಾಹಿನಿ, ಕೆಆರ್.ಪುರ: ಶ್ರೀ ರಾಮನವಮಿ ಪ್ರಯುಕ್ತ ಮಹದೇವಪುರ ಕ್ಷೇತ್ರದ ಬಿಜೆಪಿ ವತಿಯಿಂದ ದ್ವಾರಕಾ ಪೀಠದ ಗುರುಗಳಾದ ಜಗದ್ಗುರು ಸೂರ್ಯಾಚಾರ್ಯ ಕೃಷ್ಣದೇವೂನಂದ ಗಿರಿಜೀ ದಿವ್ಯ ಸಾನಿದ್ಯದಲ್ಲಿ ಹಮ್ಮಿಕೊಂಡಿದ ರಾಮರ ಯಾತ್ರೆಯು ಅದ್ಧೂರಿಯಾಗಿ ಜರುಗಿತು.
ಬೆಮಲ್ ಸರ್ಕಲ್ ನಿಂದ ಪ್ರಾರಂಭವಾದ ಶ್ರೀ ರಾಮರ ಯಾತ್ರೆಯು ಸಾವಿರಾರು ಶ್ರೀ ರಾಮ ಭಕ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಸುಮಾರು ೧೧ ಕಿ.ಮೀ ಬೈಕ್ ರ್ಯಾಲಿ ಮೂಲಕ ಹೆಚ್ ಎ ಎಲ್ ಮುಖ್ಯ ರಸ್ತೆ ಹಾಗೂ ಹೊರ ವರ್ತುಲ ರಸ್ತೆಯ ಮೂಲಕ ದೊಡ್ಡ ನಕ್ಕುಂದಿಯ ಕೋದಂಡರಾಮ ದೇವಸ್ಥಾನ ತಲುಪಿತು. ಶ್ರೀ ರಾಮರ ರಥ ಯಾತ್ರೆಯಲ್ಲಿ ಡೊಳ್ಳು ಕುಣಿತ, ಗೊಂಬೆ ಕುಣಿತ, ಕಂಸಾಳೆ ನೃತ್ಯ, ಜನಪದ ಕಲಾ ತಂಡ ಹಾಗೂ ತಮಟೆ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಿತು.
ಬಳಿಕ ಕೋದಂಡರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರವಚನ ನೀಡಿದರು. ಸುಮಂಗಲಿಯರು ಕಳಸ ಹೊತ್ತು ಯಾತ್ರೆಗೆ ಮೆರುಗು ನೀಡಿದರು.
ಹಿಂದೂ ಸನಾತನ ಧರ್ಮ ಶ್ರೇಷ್ಠ ದರ್ಮ ಅರವಿಂದ ಲಿಂಬಾವಳಿ ಅವರ ದಂಪತಿಗಳ ಅಧ್ಯಕ್ಷತೆಯಲ್ಲಿ ಶ್ರೀರಾಮರ ಕಾರ್ಯ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಸೂರ್ಯಾಚಾರ್ಯ ಕೃಷ್ಣದೇವೋನಂದ ಗಿರಿಜೀ ಮಹಾರಾಜ್ ಆಶೀರ್ವದಿಸಿ ಅಭಿನಂದಿಸಿದರು.ಪ್ರಯಾಗ್ ರಾಜ್ ದಲ್ಲಿ ನಡೆದ ಮಹಾಕುಂಬಾ ಮೇಳದಲ್ಲಿ ಅವರು ಪುಣ್ಯ ಸ್ನಾನ ಆಚರಿಸಿ ಆಹ್ವಾನಿಸಿದರು.
ಸಿ.ವಿ ರಾಮನ್ ನಗರ ಕ್ಷೇತ್ರದ ಶಾಸಕ ರಘು, ಮಹದೇವಪುರ ಕ್ಷೇತ್ರದ ಅಧ್ಯಕ್ಷರಾದ ಹೂಡಿ ಪಿಳ್ಳಪ್ಪ, ಶ್ರೀಧರ್ ರೆಡ್ಡಿ, ಮುಖಂಡರಾದ ಎಲ್.ರಾಜೇಶ್, ಸುರೇಶ್, ಲೋಕೇಶ್, ನವೀನ್ ಸೇರಿದಂತೆ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!