ಉದಯವಾಹಿನಿ, ಬೋಸ್ಟನ್: ಅನುದಾನ ಸ್ಥಗಿತ ವಿಚಾರಕ್ಕೆ ಸಂಬಂಧಿಸಿದಂತೆ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇದೀಗ ಹಾರ್ವರ್ಡ್ ವಿಶ್ವವಿದ್ಯಾಲಯ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ದಾಖಲಿಸಲು ಮುಂದಾಗಿದೆ.

ಟ್ರಂಪ್ ಆಡಳಿತ ಕ್ಯಾಂಪಸ್‌ನಲ್ಲಿ ಕ್ರಿಯಾಶೀಲತೆಯನ್ನು ಮಿತಿಗೊಳಿಸುವ ಬೇಡಿಕೆಗಳನ್ನು ಧಿಕ್ಕರಿಸುವುದಾಗಿ ಸಂಸ್ಥೆ ಹೇಳಿದ್ದ ಹಾರ್ವರ್ಡ್ ವಿಶ್ವವಿದ್ಯಾಲಯವು ಇದೀಗ 2.2 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಅನುದಾನ ಸ್ಥಗಿತಗೊಳಿಸುವಿಕೆಯನ್ನು ನಿಲ್ಲಿಸಲು ಮೊಕದ್ದಮೆ ಹೂಡಿರುವುದಾಗಿ ಸೋಮವಾರ ಪ್ರಕಟಿಸಿದೆ.

ಟ್ರಂಪ್ ಆಡಳಿತವು ಫೆಡರಲ್ ನಿಧಿಯನ್ನು ತಡೆಹಿಡಿಯುವ ಮೂಲಕ ಶೈಕ್ಷಣಿಕ ನಿರ್ಧಾರಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಮ್ಯಾಸಚೂಸೆಟ್ಸ್ ನ್ಯಾಯಾಲಯದಲ್ಲಿ ಹಾರ್ವರ್ಡ್ ವಿವಿ ಮೊಕದ್ದಮೆ ಹೂಡಿದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯವು ಹಣಕಾಸಿನ ನೆರವು ನೀಡದೆ ಶೈಕ್ಷಣಿಕ ನಿರ್ಧಾರಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ. ಟ್ರಂಪ್ ಆಡಳಿತವು ಗುರಿಯಾಗಿಸಿಕೊಂಡಿರುವ ಇತರ ಶಿಕ್ಷಣ ಸಂಸ್ಥೆಗಳ ಹೆಸರನ್ನು ಸಹ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!