ಉದಯವಾಹಿನಿ, ಫ್ಲೋರಿಡಾ: ಅಮೆರಿಕದಲ್ಲಿ ಸಂಭಾವ್ಯ ಭೀಕರ ವಿಮಾನ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, 282 ಪ್ರಯಾಣಿಕರಿದ್ದ Delta ವಿಮಾನದ ಎರಡೂ ಎಂಜಿನ್ ಗೆ ಬೆಂಕಿ ಹೊತ್ತಿದ ಘಟನೆ ವರದಿಯಾಗಿದೆ.(ಸ್ಥಳೀಯ ಸಮಯ) ಒರ್ಲ್ಯಾಂಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ ಲೈನ್ಸ್ ವಿಮಾನ ಟೇಕ್ ಆಫ್ ಆಗುವಾಗ ವಿಮಾನದ ಎರಡೂ ಎಂಜಿನ್ ಗೆ ಬೆಂಕಿ ಹೊತ್ತಿಕೊಂಡಿದೆ.
ಇದನ್ನು ಗಮನಿಸಿದ ಪೈಲಟ್ ಕೂಡಲೇ ವಿಮಾನವನ್ನು ನಿಲ್ಲಿಸಿದ್ದು, ನಂತರ ಪ್ರಯಾಣಿಕರನ್ನು ತುರ್ತು ಸ್ಲೈಡ್‌ಗಳ ಮೂಲಕ ಸ್ಥಳಾಂತರಿಸಲಾಗಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ಡೆಲ್ಟಾ ಏರ್ ಲೈನ್ಸ್ ಅನ್ನು ಉಲ್ಲೇಖಿಸಿ ಸಿಎನ್‌ಎನ್ ಈ ವರದಿ ಮಾಡಿದೆ.
ಅಟ್ಲಾಂಟಾಗೆ ತೆರಳುತ್ತಿದ್ದ ವಿಮಾನವು ರನ್‌ವೇಗೆ ಹೊರಟಾಗ ಎರಡು ಎಂಜಿನ್‌ಗಳಲ್ಲಿ ಒಂದು ಬೆಂಕಿಗೆ ಆಹುತಿಯಾಯಿತು. ಟರ್ಮಿನಲ್‌ನಲ್ಲಿ ಪ್ರಯಾಣಿಕರೊಬ್ಬರ ತಮ್ಮ ಸೆಲ್‌ಫೋನ್ ನಲ್ಲಿ ಈ ವಿಡಿಯೋ ಸೆರೆ ಹಿಡಿದಿದ್ದು, ವಿಮಾನದ ಬಲ ಎಂಜಿನ್‌ನಿಂದ ಜ್ವಾಲೆ ಹೊರಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಇನ್ನು ಘಟನೆಯ ಬಗ್ಗೆ ಎಫ್‌ಎಎ ತನಿಖೆಯನ್ನು ಪ್ರಾರಂಭಿಸಿದೆ.
ವಿಮಾನದಲ್ಲಿ 282 ಪ್ರಯಾಣಿಕರಿದ್ದರು, ಅದೃಷ್ಟವಶಾತ್, ಯಾವುದೇ ಗಾಯಗಳು ವರದಿಯಾಗಿಲ್ಲ. ವಿಮಾನದ ಎರಡು ಎಂಜಿನ್‌ಗಳಲ್ಲಿ ಒಂದರ ಟೈಲ್‌ಪೈಪ್‌ನಲ್ಲಿ ಜ್ವಾಲೆಗಳು ಕಂಡುಬಂದಾಗ ಡೆಲ್ಟಾ ವಿಮಾನ ಸಿಬ್ಬಂದಿ ಪ್ರಯಾಣಿಕರ ಕ್ಯಾಬಿನ್ ಅನ್ನು ಸ್ಥಳಾಂತರಿಸಲು ಕಾರ್ಯವಿಧಾನಗಳನ್ನು ಅನುಸರಿಸಿದರು” ಎಂದು ಸಿಎನ್‌ಎನ್ ವರದಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!