ಉದಯವಾಹಿನಿ, ಚಿಕ್ಕಮಗಳೂರು,: ಮನೆಯ ಮುಂದೆ ದಾಸ್ತಾನು ಮಾಡಲಾಗಿದ್ದ ಕಾಳುಮೆಣಸನ್ನು ಕಳವು ಮಾಡಿದ್ದ ಐದು ಮಂದಿಯನ್ನು ಮೂಡಿಗೆರೆ ಠಾಣಾ ಪೊಲೀಸರು ಬಂಧಿಸಿ 1.03 ಲಕ್ಷ ಮೌಲ್ಯದ 145 ಕೆಜಿ ಕಾಳುಮೆಣಸು ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಬೈಲಹಳ್ಳಿ ಗ್ರಾಮದ ದರ್ಶನ್ (21), ಚಿಕ್ಕಮಗಳೂರು ಜಿಲ್ಲೆಯ ಕುಂದೂರಿನ ಗಿರೀಶ (27), ರಮೇಶ (20), ಅಕ್ಷಯ(27) ಹಾಗೂ ಪ್ರಶಾಂತ ಬಂಧಿತ ಆರೋಪಿಗಳು.
ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದ ಕೃಷಿಕ ರಾಮಚಂದ್ರಪ್ಪ ಎಂಬುವವರು ಮನೆಯ ಮುಂದಿನ ಜಗಲಿಯ ಮೇಲೆ 145 ಕೆಜಿ ಕಾಳುಮೆಣಸನ್ನು ಒಣಗಿಸಿ ಮೂಟೆಯಲ್ಲಿ ಕಟ್ಟಿ ದಾಸ್ತಾನು ಮಾಡಿದ್ದರು. ಕೆಲಸದ ನಿಮಿತ್ತ ದಂಪತಿ ಮೂಡಿಗೆರೆ ಪಟ್ಟಣಕ್ಕೆ ತೆರಳಿ ವಾಪಸ್ ಮನೆಗೆ ಬಂದಾಗ ಕಾಳುಮೆಣಸು ಮೂಟೆಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮೂಡಿಗೆರೆ ಠಾಣೆಗೆ ದೂರು ನೀಡಿದ್ದರು.
