ಉದಯವಾಹಿನಿ, ಮೈಸೂರು: ಕುಮಾರಸ್ವಾಮಿ ಅವರ ಕಾಲದಲ್ಲೇ 7 ಟೌನ್‌ ಶಿಪ್‌ ಮಾಡಲು ತೀರ್ಮಾನ ಆಗಿತ್ತು,ಅದಕ್ಕಾಗಿ 300 ಕೋಟಿ ಹಣ ಕೊಟ್ಟಿದ್ದರು,ಟೌನ್‌ ಶಿಪ್‌ ಪ್ಲಾನ್‌ ಅವರ ಕಾಲದಲ್ಲೇ ಆಗಿದ್ದು.ನಾನು ಡಿನೋಟಿಫಿಕೇಶ್‌ ಮಾಡಲು ಹೋಗಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.ಬಿಡದಿ ಟೌನ್‌ ಶಿಪ್‌ಗೆ ರೈತರ ಭೂಮಿ ಕೈಬಿಡುವಂತೆ ಸಿಎಂಗೆ ದೇವೇಗೌಡರ ಪತ್ರಬರೆದ ಕುರಿತು ಮಾಧ್ಯಮದೊಂದಿಗೆ ಮಾತನಾಡಿ ಅವರು ಈ ಹಿಂದೆ ನನ್ನ ಮೇಲೆ ಏನೆಲ್ಲಾ ಹೇಳಿದ್ರು. ಅದೆಲ್ಲ ಇತಿಹಾಸ.ಟೌನ್‌ ಶಿಪ್‌ ಪಿತಾಮಹ ದೇವೇಗೌಡ ಹಾಗೂ ಕುಮಾರಸ್ವಾಮಿ,ಯಾರು ಏನೇ ಹೇಳಿದ್ರು ಗ್ರೇಟರ್‌ ಬೆಂಗಳೂರು ಮಾಡೇ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
ಬೆಂಗಳೂರಿಗಿಂತ ಚೆನ್ನಾಗಿ 10 ಸಾವಿರ ಎಕರೆಯಲ್ಲಿ ಉತ್ತಮ ಸಿಟಿ ಮಾಡುತ್ತೇವೆ. ಇದು ಮಾಡೆಲ್‌ ಸಿಟಿ ಆಗುತ್ತೆ.ರೈತರು ಜಮೀನಿನ ಬದಲಾಗಿ ದುಡ್ಡು ತೆಗೆದುಕೊಳ್ಳಬಹುದು.ಇಲ್ಲದಿದ್ರೆ ಅಭಿವೃದ್ದಿ ಪಡಿಸಿದ ಭೂಮಿ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.
ಎರಡು ಬಾರಿ ಕುಮಾರಸ್ವಾಮಿ ಸಿಎಂ ಆದ್ರೂ ಯಾಕೆ ರೈತರ ಭೂಮಿ ಸ್ವಾಧೀನದಿಂದ ಕೈ ಬಿಡಲಿಲ್ಲ.ಈ ಬಗ್ಗೆ ದೇವೇಗೌಡರೇ ಹೇಳಲಿ,ಇದರಲ್ಲಿ ರಾಜಕೀಯ ಬೇಡ
ಇದೆಲ್ಲ ನಿಮ್ಮ ಮಗನೆ ಮಾಡಿದ್ದು, ನಿಮ್ಮ ಕಾಲದಲ್ಲೇ ಆಗಿದ್ದು ಎಂದು ಡಿಕೆಶಿ ಟಾಂಗ್‌ ನೀಡಿದರು. ಕಾವೇರಿ ನಮ್ಮ ಜೀವನದಿ, ತಾಯಿಯ ಆರತಿ ಮಾಡ್ಬೇಕು.ಹೀಗಾಗಿ ಕಾವೇರಿ ಆರತಿ ಮಾಡಲು ಮುಂದಾಗಿ ದ್ದೇವೆ.ವ್ಯವಸಾಯ ,ಕುಡಿಯಲು ನೀರು ಎಲ್ಲವನ್ನೂ ತಾಯಿ ಕೊಡುತ್ತಿದ್ದಾಳೆ.ರಾಜ್ಯಕ್ಕೆ ,ಎಲ್ಲರಿಗೂ ಒಳಿತಾಗಲಿ ಎಂದು ಆರತಿ ಮಾಡುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!