ಉದಯವಾಹಿನಿ, ಇಸ್ಲಾಮಾಬಾದ್: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಆಘಾತಕಾರಿ ತಪ್ಪೊಪ್ಪಿಗೆಯನ್ನು ನೀಡಿದ್ದಾರೆ. ಬ್ರಿಟನ್‌ನ ಸ್ಕೈ ನ್ಯೂಸ್ ಜೊತೆಗಿನ ಸಂಭಾಷಣೆಯ ಸಮಯದಲ್ಲಿ ಖವಾಜಾ ಆಸಿಫ್, ಪಾಕಿಸ್ತಾನವು ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ದೀರ್ಘ ಇತಿಹಾಸವನ್ನು ಹೊಂದಿದೆ ಎಂದು ಒಪ್ಪಿಕೊಂಡರು. ನಾವು 30 ವರ್ಷಗಳಿಂದ ಅಮೆರಿಕಕ್ಕಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.ಭಾರತದೊಂದಿಗಿನ ಸಂಪೂರ್ಣ ಯುದ್ಧದ ಬಗ್ಗೆ ಮಾತನಾಡಿದ ಖವಾಜಾ ಆಸಿಫ್, ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾ ಮುಗಿದಿದೆ ಎಂದು ಹೇಳಿದರು. ಲಷ್ಕರ್-ಎ-ತೊಯ್ಬಾ ಹಿಂದೆ ಪಾಕಿಸ್ತಾನದೊಂದಿಗೆ ಕೆಲವು ಸಂಪರ್ಕಗಳನ್ನು ಹೊಂದಿತ್ತು ಎಂದು ಖವಾಜಾ ಆಸಿಫ್ ಒಪ್ಪಿಕೊಂಡರು. ಆದರೆ, ಈಗ ಈ ಭಯೋತ್ಪಾದಕ ಸಂಘಟನೆ ಅಂತ್ಯಗೊಂಡಿದೆ ಎಂದು ಅವರು ಹೇಳಿದರು. ಪಾಕಿಸ್ತಾನದೊಂದಿಗೆ ಲಷ್ಕರ್ ನಂಟು ಕಂಡುಕೊಂಡ ಮಾತ್ರಕ್ಕೆ ನಾವು ಅದಕ್ಕೆ ಸಹಾಯ ಮಾಡುತ್ತೇವೆ ಎಂದರ್ಥವಲ್ಲ ಎಂದು ಅವರು ಹೇಳಿದರು. ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಲಷ್ಕರ್‌ನ ಅಂಗ ಸಂಸ್ಥೆ ವಹಿಸಿಕೊಂಡಿದೆ ಎಂದು ಖ್ವಾಜಾ ಆಸಿಫ್ ನನ್ನು ಕೇಳಿದಕ್ಕೆ ಮಾತೃ ಸಂಸ್ಥೆ ಅಸ್ತಿತ್ವದಲ್ಲಿಲ್ಲ. ಇನ್ನು ಶಾಖೆಯ ಸಂಸ್ಥೆ ಎಲ್ಲಿಂದ ಬರುತ್ತದೆ ಎಂದು ಅವರು ಹೇಳಿದರು. ಏಪ್ರಿಲ್ 22ರಂದು ಭಯೋತ್ಪಾದಕರು 26 ಅಮಾಯಕ ಪ್ರವಾಸಿಗರನ್ನು ಕೊಂದ ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಲಷ್ಕರ್‌ನಿಂದ ಅಂಗ ಸಂಸ್ಥೆ ಟಿಆರ್‌ಎಫ್ ಎಂಬ ಭಯೋತ್ಪಾದಕ ಸಂಘಟನೆ ವಹಿಸಿಕೊಂಡಿದೆ.

ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತದೆಯೇ ಎಂದು ಪ್ರಶ್ನಿಸಿದ್ದಕ್ಕೆ ಖವಾಜಾ ಆಸಿಫ್ ಅದನ್ನು ಒಪ್ಪಿಕೊಂಡರು. ನಾವು ಮೂರು ದಶಕಗಳಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕಾಗಿ ಮತ್ತು ಬ್ರಿಟನ್‌ಗಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಇದು ನಮ್ಮ ತಪ್ಪು ಮತ್ತು ಇದು ನಮಗೆ ನಷ್ಟವನ್ನುಂಟು ಮಾಡಿದೆ ಎಂದು ಖ್ವಾಜಾ ಆಸಿಫ್ ಹೇಳಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!