ಉದಯವಾಹಿನಿ, ಚಿಂಚೋಳಿ: ಪಟ್ಟಣದ ಚಂದಾಪೂರದಲ್ಲಿ ಶುಕ್ರವಾರ ಸಾಯಂಕಾಲ ಧಾರಾಕಾರ ಗಾಳಿ ಮಳೆ ಸುರಿಯುತ್ತಿರುವುದರಿಂದ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 2015-2016ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಮೈಕ್ರೋ ಯೋಜನೆಯಡಿಯಲ್ಲಿ ಅಂದಾಜು 2ಕೋಟಿ ರೂಪಾಯಿಯಲ್ಲಿ ನಿರ್ಮಿಸಿದ ಒಳಾಂಗಣಕ್ರೀಡಾಂಗಣದ ಸಂಪೂರ್ಣ ಮೇಲ್ಛಾವಣಿ ತಗಡುಗಳು ಗೋಡೆ ಕಾಲಂಗಳು ಕಿತ್ತುಹೋಗಿ ಗಾಳಿಗೆ ಸುಮಾರು 300ಮೀಟರ್ ದೂರ ಬಿದ್ದಿವೆ ಇದಕ್ಕೆ ನೇರವಾಗಿ ಕಳಪೆ ಕಾಮಗಾರಿಯೇ
ಕಾರಣವೆಂದು ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್ ದೂರಿದರು.ಧಾರಾಕಾರ ಮಳೆಗೆ ಗಾಳಿಗೆ ಇಷ್ಟೆಲ್ಲಾ ಮೇಲ್ಛಾವಣಿ ಕಿತ್ತುಹೋಗಲು ಲ್ಯಾಂಡ್ ಆರ್ಮಿ ಅಧಿಕಾರಿಗಳು ಮತ್ತು ಪುರಸಭೆ ಮುಖ್ಯಾಧಿಕಾರಿ ಹಾಗೂ ಜೆಇ ನೇರಹೊಣೆಯಾಗಿದ್ದಾರೆ,ಕ್ರೀಡಾಂಗಣ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 200ಮನೆಗಳು ವಾಸ ಮಾಡುತ್ತಾರೆ ದೂರದೃಷ್ಟ ಯಾರಿಗೂ ಹಾನಿಯಾಗಿಲ್ಲಾ ಯಾರಿಗಾದರೂ ಜೀವ ಹಾನಿಯಾದರೆ ಯಾರು ಹೊಣೆವೆಂದು ಅವರು ಪ್ರೇಶ್ನೇಸಿದ್ದರು.2015-16ರಲ್ಲಿ ನಿರ್ಮಿಸಿದರೂ ಇಲ್ಲಿಯವರೆಗೂ ಪುರಸಭೆಗೆ ಹಸ್ತಾಂತರ ಮಾಡಿರುವುದಿಲ್ಲ,ಪುರಸಭೆ ಸಾಮಾನ್ಯ ಸಭೆಯಲ್ಲಿ ನಡವಳಿ ಮಾಡಿ ಲ್ಯಾಂಡ್ ಆರ್ಮಿ ಇಲಾಖೆಯವರಿಗೆ ಪತ್ರ ಕಳುಹಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ,ಹಾಗೂ ಅನೇಕ ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸಂಬಂಧ ಪಟ್ಟ ಮೇಲಾಧೀಕಾರಿಗಳು ಸಚಿವರು ತಕ್ಷಣವೇ ಮುತುವರ್ಜಿ ವಹಿಸಿ ಅಂದಾಜು 2ಕೋಟಿ ರೂಪಾಯಿಯಲ್ಲಿ ಒಳ ಕ್ರೀಡಾಂಗಣ ಕಳಪೆ ಕಾಮಗಾರಿ ನಿರ್ಮಿಸಿದ್ದು ಇಲಾಖೆಗೆ ಕಪ್ಪುಪಟ್ಟಿಗೆ ಸೇರಿಸಿ ಲ್ಯಾಂಡ್ ಆರ್ಮಿ ಅಧಿಕಾರಿಗಳಿಂದ ಮತ್ತು ಗುತ್ತಿಗೆದಾರರಿಂದ 2ಕೋಟಿ ರೂಪಾಯಿ ವಸೂಲಿ ಮಾಡಿ ಪುನಃ ನಿರ್ಮಾಣ ಮಾಡಬೇಕು

ಹಾಗೂ ಲ್ಯಾಂಡ್ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ಜೆಇಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ್,ಅಬ್ದುಲ್ ಬಾಷೀದ್,ಶರಣುಪಾಟೀಲ ಆಗ್ರಹಿಸಿದರು. ಕೆ.ಎಂ.ಬಾರಿ,ಸಂತೋಷ ಗುತ್ತೇದಾರ,ನೀಲಕಂಠ ಸೀಳಿನ,ಘಾಳಪ್ಪಾ,ರಾಜು ಮುಸ್ತಾರಿ ಸೇರಿದಂತೆ ಅನೇಕ ಕ್ರೀಡಾ ಅಭಿಮಾನಿಗಳು ಇದ್ದರು.
