ಉದಯವಾಹಿನಿ,ಕಲಬುರಗಿ: ಈಚೆಗೆ ಸುರಿದ ಮಳೆ, ಗಾಳಿಗೆ ವಿದ್ಯುತ್ ಹಡಗಿಲ್ ಹಾರುತಿ ಗ್ರಾಮದಲ್ಲಿ ವಿದ್ಯುತ್ ಕಂಬ ಧರೆಗುರುಳಿದೆ.
ಗ್ರಾಮದ ಶಂಕರ ಬಸಣ್ಣ ಬಿಳಾಳ ಅವರ ಜಮೀನಿನಲ್ಲಿ ಮಳೆ, ಗಾಳಿಯಿಂದ ವಿದ್ಯುತ್ ಕಂಬ ನೆಲಕ್ಕುರುಳಿದೆ.
ವಿದ್ಯುತ್ ಕಂಬ ನೆಲಕ್ಕುರುಳಿ ಒಂದು ವಾರವಾದರೂ ಜೆಸ್ಕಾಂ ಈ ಬಗ್ಗೆ ನಿಗಾವಹಿಸುತ್ತಿಲ್ಲ ಎಂದು ಆರೋಪ ಕೇಳಿ ಬಂದಿದೆ.
ಸಂಬಂಧಪಟ್ಟವರು ಈ ಬಗ್ಗೆ ನಿಗಾ ವಹಿಸಿ ಧರೆಗುರಿಳಿದ ವಿದ್ಯುತ್ ಕಂಬ ತೆಗೆದು ಬೇರೆ ವಿದ್ಯುತ್ ಕಂಬ ಅಳವಡಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
