ಉದಯವಾಹಿನಿ, ಬಾಗೇಪಲ್ಲಿ: ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಪುರ, ಗ್ಯಾದಿವಾಂಡ್ಲಪಲ್ಲಿ ಸುತ್ತಮುತ್ತಲಿನ ಗ್ರಾಮಗಳ ರೈತರು ಪಾತಪಾಳ್ಯ ಪೊಲೀಸ್ ಠಾಣೆ ಮುಂಭಾಗದಲ್ಲಿ ಜಮಾಯಿಸಿ ಶಾಸಕ ಸುಬ್ಬಾರೆಡ್ಡಿ ವಿರುದ್ದ ದಿಕ್ಕಾರಗಳು ಕೂಗಿ ಪ್ರತಿಭಟನೆ ನಡೆಸಿ ಹೋರಾಟಗಾರ ಡಾ.ಮುಧುಸೀತಪ್ಪ ಮತ್ತು ಶಾಂತರಾಜು ವಿರುದ್ದ ದಾಖಲು ಮಾಡಿರುವ ಸುಳ್ಳು ಅಟ್ರಾಸಿಟಿ ಕೇಸನ್ನು ವಾಪಸ್ಸು ಪಡೆದು ರೈತರಿಗೆ ಸೂಕ್ತ ಭದ್ರತೆ ಓದಗಿಸಿ ರೈತರ ಮೇಲೆ ಗೊಂಡಾಗಿರಿ ಮಾಡುತ್ತಿರುವ ವಕೀಲ ಚಂದ್ರಶೇಖರರೆಡ್ಡಿ, ಗಿರೀಶ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಪೊಲೀಸ್ ವೃತ್ತ ನಿರೀಕ್ಷಕ ಪಿ.ಆರ್.ಜನಾರ್ಧನ್‌ರನ್ನು ಒತ್ತಾಯಿಸಿದರು.
ರೈತರ ಪ್ರತಿಭಟನೆ ನಂತರ ಚಿಕ್ಕಬಳ್ಳಾಪುರ ಪೊಲೀಸ್ ಡಿವೈಎಸ್ಪಿ ಶಿವಪುರ ಬಳಿಯಲ್ಲಿರುವ ಡಾ.ಮುಧುಸೀತಪ್ಪ ಪಾರ್ಮ್ಹೌಸ್‌ಗೆ ಬೇಟಿ ನೀಡಿ ಸಿಸಿ ಕ್ಯಾಮರ ದೃಶ್ಯಾವಳಿಗಳನ್ನು ಪರಿಶೀಲಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿರುತ್ತಾರೆ.
ಶಿವಪುರ ಸೂರ್ಯನಾರಾಯಣರೆಡ್ಡಿ ಮಾತನಾಡಿ, ಶಿವಪುರ ಗ್ರಾಮದ ಹೊರವಲಯದಲ್ಲಿರುವ ಡಾ.ಮಧುಸೀತಪ್ಪ ಪಾರ್ಮ್ಹೌಸ್ ಬಳಿ ಹೋಗಿರುವ ಶಾಸಕರ ಬೆಂಬಲಿಗರು ಮಧುಸೀತಪ್ಪ ಇಲ್ಲದ ಸಮಯದಲ್ಲಿ ದಾಂಧಲೆ ನಡೆಸಿ, ಗ್ರಾಮದಲ್ಲೆ ಇಲ್ಲದ ಡಾ.ಮಧುಸೀತಪ್ಪ ಮೇಲೆ ಸುಳ್ಳು ಅಟ್ರಾಸಿಟಿ ಕೇಸು ದಾಖಲಿಸಿರುವ ಮಾದರಿಯಲ್ಲಿ ನಾವು ಕೊಟ್ಟಿರುವ ಅಟ್ರಾಸಿಟಿ ಕೇಸನ್ನು ದಾಖಲಿಸಿಕೊಂಡು ನ್ಯಾಯ ಓದಗಿಸಬೇಕು, ಹಲವು ಕ್ರಿಮಿನಲ್ ಕೇಸುಗಳಲ್ಲಿ ಆರೋಪಿಗಳಾಗಿರುವವರು ಕೊಟ್ಟಿರುವ ದೂರುನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಾಸಕರ ಮೌಖಿಕ ಅದೇಶದಂತೆ ರೈತರು ನೀಡುವ ದೂರುಗಳನ್ನು ಸ್ವೀಕರಿಸದೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಈ ಪ್ರತಿಭಟನೆಯಲ್ಲಿ ಶೀಗಲಪಲ್ಲಿ ರಾಜಣ್ಣ, ಮೋಹನ್‌ರೆಡ್ಡಿ, ರೆಡ್ಡಪ್ಪ, ಉತ್ತನ್ನ, ಮದ್ದಿರೆಡ್ಡಿ, ಸೋಮು, ಸಿದ್ದೇಶ್, ಲಕ್ಷ್ಮೀನಾರಾಯಣ, ನಾರಾಯಣಸ್ವಾಮಿ, ಲಕ್ಷ್ಮೀಪತಿ, ರಾಮಾಂಜಿ, ಅಂಜಿನಪ್ಪ, ವೆಂಕಟರಾಮರೆಡ್ಡಿ, ಗಣೇಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!