ಉದಯವಾಹಿನಿ, ಶ್ರೀನಗರ :  ಜಮು ಮತ್ತು ಕಾಶೀರದ ಜೈಲುಗಳ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಬಂದಿದೆ. ಪಹಲ್ಗಾಮ್‌ನಲ್ಲಿ ಕೆಲವು ದಿನಗಳ ಹಿಂದೆ ನಡೆದ ಪ್ರವಾಸಿಗರ ಮಾರಣಹೋಮದ ಬೆನ್ನಲ್ಲೇ ಉಗ್ರರು ಕಣಿವೆ ರಾಜ್ಯದಲ್ಲಿ ಮತ್ತೆ ಡೆಡ್ಲಿ ಅಟ್ಯಾಕ್‌ಗೆ ಸಂಚು ರೂಪಿಸಿರುವುದು ಬಯಲಾಗಿದೆ.
ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಮೂಲಗಳು ನೀಡಿದ್ದು, ಹೈ ಪೊಫೈಲ್‌ ಭಯೋತ್ಪಾದಕರು ಮತ್ತು ಶಂಕಿತ ಉಗ್ರರನ್ನು ಇರಿಸಿರುವ ಹಲವಾರು ಜೈಲುಗಳು ಭಯೋತ್ಪಾದಕ
ದಾಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿವೆ. ಇದರಿಂದಾಗಿ ಭದ್ರತೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಗುಪ್ತಚರ ಮಾಹಿತಿಯ ಪ್ರಕಾರ ಶ್ರೀನಗರ ಕೇಂದ್ರ ಜೈಲು ಮತ್ತು ಜಮುವಿನ ಕೋಟ್‌ ಬಲ್ವಾಲ್‌ ಜೈಲುಗಳನ್ನು ಗುರಿಯಾಗಿಸಿ ದಾಳಿ ನಡೆಸಬಹುದು ಎಂದು ಅಂದಾಜಿಸಲಾಗಿದೆ.
ಈ ಜೈಲುಗಳಲ್ಲಿ ಪ್ರಸ್ತುತ ಭಯೋತ್ಪಾದಕರು ಹಾಗೂ ಭೂಗತ ಲೋಕದ ಕೊಲೆ ಪಾತಕಿಗಳಿದ್ದಾರೆ. ಅವರು ದಾಳಿಗಳಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಸಹ, ಲಾಜಿಸ್ಟಿಕಲ್‌ ಸಹಾಯ, ಆಶ್ರಯ ಮತ್ತು ಅವರ ಓಡಾಟ ಸುಗಮಗೊಳಿಸುವ ಮೂಲಕ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಾರೆ.

Leave a Reply

Your email address will not be published. Required fields are marked *

error: Content is protected !!