ಉದಯವಾಹಿನಿ, ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಅತ್ಯಂತ ಅಪ್ರತಿಮ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿರುವ 17ನೇ ಶತಮಾನದ ಮೊಘಲ್ ದೊರೆಯ ಕೆಂಪು ಕೋಟೆಯನ್ನು ಕೊನೆಯ ಮೊಘಲ್ ಚಕ್ರವರ್ತಿ ಬಹದ್ದೂರ್ ಷಾ ಜಾಫರ್ 11ರ ಮೊಮ್ಮಗನ ವಿಧವೆಗೆ ಹಸ್ತಾಂತರಿಸಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸುಲ್ತಾನಾ ಬೇಗಂ ಅವರ ಮನವಿಯ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ಕೆಂಪು ಕೋಟೆ ಮಾತ್ರ ಏಕೆ? ಫತೇಪುರ್ ಸಿಕ್ರಿ (16 ನೇ ಶತಮಾನದ ಉತ್ತರಾರ್ಧದಲ್ಲಿ ಅಕ್ಬರ್ ಆಳ್ವಿಕೆಯಲ್ಲಿ ಮೊಘಲ್ ಸಾವ್ರಾಜ್ಯದ ರಾಜಧಾನಿ), ತಾಜ್ ಮಹಲ್ (17 ನೇ ಶತಮಾನದಲ್ಲಿ ಷಹಜಹಾನ್ ಅವರಿಂದ ಪ್ರಸಿದ್ಧವಾಗಿ ನಿಯೋಜಿಸಲ್ಪಟ್ಟ) ಏಕೆ?ನೀವು ಇದನ್ನು ನಿಮ ವಶಕ್ಕೆ ಬೇಕು ಎಂದು ಬಯಸುತ್ತೀರಿ… ಎಂದು ಅರ್ಜಿದಾರರನ್ನು ತರಟೆಗೆ ತೆಗೆದುಕೊಂಡರು.
ಕೆಲ ಕಾಲ ಗೊಂದಲಕ್ಕೊಳಗಾದ ಮುಖ್ಯ ನ್ಯಾಯಾಧೀಶರು ತಪ್ಪಾಗಿ ಗ್ರಹಿಸಿದ ಮನವಿಯನ್ನು ತಿರಸ್ಕರಿಸಿದರು. ಕೋಲ್ಕತ್ತಾದ ಬಳಿಯ ಹೌರಾದಲ್ಲಿ ವಾಸಿಸುತ್ತಿರುವ ಸುಲ್ತಾನಾ ಬೇಗಂ ಅವರು ಕೆಂಪು ಕೋಟೆಯನ್ನು ತನ್ನ ಮೂಲ ಮಾಲೀಕರಾದ ಅಂದರೆ ಮೊಘಲ್ ಚಕ್ರವರ್ತಿಗಳ ವಂಶಸ್ಥರು ಎಂಬ ಕಾರಣಕ್ಕೆ ಕೆಂಪು ಕೋಟೆಯನ್ನು ತಮ ಸುಪರ್ದಿಗೆ ನೀಡುವಂತೆ ಮನವಿ ಮಾಡಿದ್ದರು.
