ಉದಯವಾಹಿನಿ, ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ನೀಡುತ್ತಿದೆ. ಭಾರತೀಯ ಸೇನೆ ಮುಂದೆ ನಿಲ್ಲಲು ಸಾಧ್ಯವಾಗದೆ ಪಾಕಿಸ್ತಾನ ಸೇನೆ ಪತರುಗುಟ್ಟಿದೆ. ಇದೇ ಸಮಯದಲ್ಲಿ ಅತ್ತ ಬಲೂಚಿಸ್ತಾನದ ಆರ್ಮಿ ಪಡೆ ಸಹ ಪಾಕಿಸ್ತಾನದ ಸೇನೆ ಮೇಲೆ ಮುಗಿಬಿದ್ದಿದೆ. 12 ಪಾಕಿಸ್ತಾನ ಸೈನಿಕರು ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ್ದು ಸೈನಿಕರ ದೇಹಗಳು ಚೂರು ಚೂರಾಗಿದ್ದವು. ಈ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ತಾಲಿಬಾನ್ ಸಹ ಪಾಕಿಸ್ತಾನ ಸೇನೆ ಮೇಲೆ ಮುಗಿಬಿದ್ದಿದೆ. ತೆಹ್ರೀಕ್-ಇ-ತಾಲಿಬಾನ್ (TTP) ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ಸೈನಿಕರನ್ನು ಲೇಸರ್ ರೈಫಲ್‌ಗಳನ್ನು ಬಳಸಿ ಕೊಲ್ಲಲಾಗಿದೆ ಎಂದು ಹೇಳಲಾಗಿದೆ. ಭಾರತದೊಂದಿಗಿನ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನಕ್ಕೆ ಇದು ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದೆ. ಈ ದಾಳಿಯನ್ನು ತೆಹ್ರೀಕ್-ಇ ತಾಲಿಬಾನ್ ನಡೆಸಿದ್ದು, ದಕ್ಷಿಣ ವಜೀರಿಸ್ತಾನದ ಶಕೈನಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದ ಸೇನಾ ವಾಹನಗಳು ಸಹ ನಾಶವಾಗಿದೆ. ಅಲ್ಲದೆ, ಈ ದಾಳಿಯಲ್ಲಿ, ಟಿಟಿಪಿ ಪಾಕಿಸ್ತಾನಿ ಸೇನೆಯ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಂಡಿದೆ.
