ಉದಯವಾಹಿನಿ, ಕೇದಾರನಾಥ: ಜನಸಾಮಾನ್ಯರ ಹಾಗೂ ಭಕ್ತರ ಹಿತದೃಷ್ಟಿಯಿಂದ ಹಿಂದೂಗಳ ಪವಿತ್ರಾ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಕೇದಾರನಾಥ ಮತ್ತು ಬದರಿನಾಥ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಕೇದಾರನಾಥ ದೇವಾಲಯವು ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ದೇವಾಲಯವು ಮಂದಾಕಿನಿ ನದಿ ಮಟ್ಟದಿಂದ 3,583 ಅಡಿ ಎತ್ತರದಲ್ಲಿದೆ. ಗಾಂಧಿ ಸರೋವರ, ಸನ್‌ ಪ್ರಯಾಗ, ಗೌರಿಕುಂಡ್‌ ದೇವಸ್ಥಾನ, ವಾಸುಕಿ ತಾಲ್‌‍, ಶಂಕರಾಚಾರ್ಯ ಸಮಾಧಿ, ಭೈರವನಾಥ ದೇವಸ್ಥಾನ, ರುದ್ರ ಗುಹೆ ತಾಣಗಳನ್ನು ವೀಕ್ಷಿಸಬಹುದು.
ಚಾರ್‌ ಧಾಮ ಯಾತ್ರೆಯ ಕೊನೆಯ ದೇವಾಲಯವಾದ ಬದರಿನಾಥ ದೇವಾಲಯವು ಅಲಕನಂದಾ ನದಿ ಮಟ್ಟದಿಂದ 3,133 ಅಡಿ ಎತ್ತರದಲ್ಲಿದೆ. ಇಲ್ಲಿನ ಬದರಿ ಮರದ ಕೆಳಗೆ ವಿಷ್ಣು ಧ್ಯಾನ ಮಾಡಿದ್ದನೆಂದು ಭಕ್ತರು ನಂಬುತ್ತಾರೆ. ಯಾತ್ರೆ ವೇಳೆಯಲ್ಲಿ ಭಕ್ತರು ವಸುಧಾರಾ ಜಲಪಾತ, ನಾರದ ಕುಂಡ, ಸತೋಪಂತ್‌ ಟ್ರೆಕ್‌, ಹೇಮಕುಂಡ ಸಾಹಿಬ್‌‍, ಫ್ಲವರ್‌ಸ್‌‍ ವ್ಯಾಲಿ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ.
ಉತ್ತರಾಖಂಡದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರಿನಾಥಗಳನ್ನು ಒಟ್ಟಾಗಿ ಚಾರ್‌ ಧಾಮ್‌ ಯಾತ್ರೆ ಎಂದು ಹೇಳುತ್ತಾರೆ. ಈ ತೀರ್ಥಯಾತ್ರೆಯ ಭಾಗವಾಗಿ ಭಕ್ತರು ಈ ನಾಲ್ಕು ಪವಿತ್ರ ಸ್ಥಳಗಳಿಗೆ ಭೇಟಿ ಕೊಡುತ್ತಾರೆ. ದೇಶಾದ್ಯಂತದ ಕೋಟ್ಯಂತರ ಭಕ್ತರು ಈ ಯಾತ್ರೆಯಲ್ಲಿ ಭಾಗವಹಿಸಿ ಆಧ್ಯಾತಿಕ ಜಗತ್ತಿನಲ್ಲಿ ತಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಚಾರ್‌ ಧಾಮ ಯಾತ್ರೆಯ ಸಮಯದಲ್ಲಿ ಭೇಟಿ ನೀಡುವ ಮೊದಲ ಯಾತ್ರಾ ಸ್ಥಳ ಯಮುನೋತ್ರಿ. ಇದು ಯಮುನಾ ನದಿ ಮಟ್ಟದಿಂದ 3,293 ಅಡಿ ಎತ್ತರದಲ್ಲಿದೆ. ರೈಥಾಲ್‌‍, ಬಸುರ್‌, ಉತ್ತರಕಾಶಿ, ಹನುಮಾನ್‌ ಚಟ್ಟಿ, ಜಾನಕಿ ಚಟ್ಟಿ, ಖರ್ಸಾಲಿ, ಬಾರ್ಕೋಟ್‌‍, ದಿಯಾರಾ ಬುಗ್ಯಾಲ್‌ ತಾಣಗಳಿಗೆ ಭೇಟಿ ನೀಡಲಾಗುತ್ತದೆ.
ಚಾರ್‌ ಧಾಮ ಯಾತ್ರೆಯಲ್ಲಿ ಗಂಗೋತ್ರಿ ಧಾಮವು ಎರಡನೇ ತೀರ್ಥಯಾತ್ರೆಯ ತಾಣವಾಗಿದೆ. ಇದು ಗಂಗಾ ನದಿ ಮಟ್ಟದಿಂದ 3,100 ಅಡಿ ಎತ್ತರದಲ್ಲಿದೆ. ಭಾಗೀರಥಿ ಬೆಟ್ಟ, ದೋಡಿ ತಾಲ್‌‍, ಕೇದಾರ ತಾಲ್‌‍, ಗಂಗೋತ್ರಿ ದೇವಾಲಯ, ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ, ಗೋಮುಖ ತಪೋವನ ಚಾರಣ, ಕೇದಾರ ತಾಲ್‌ ಚಾರಣಕ್ಕೆ ಭೇಟಿ ಕೊಡಬಹುದು.

Leave a Reply

Your email address will not be published. Required fields are marked *

error: Content is protected !!