ಉದಯವಾಹಿನಿ, ಬೆಂಗಳೂರು: ರಾಜ್ಯ ಸರ್ಕಾರದ ಕೆಳ ಹಂತದ ಹುದ್ದೆಗಳಲ್ಲಿರುವ ಅಭ್ಯರ್ಥಿಗಳಿಗೆ ಕೆನೆಪದರದಿಂದ ವಿನಾಯಿತಿ ನೀಡುವ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (SES-2015) ಆಧರಿಸಿ ಹಿಂದುಳಿದ ವರ್ಗಗಳ ಆಯೋಗವು ತನ್ನ ಶಿಫಾರಸುಗಳಲ್ಲಿ ಒಬಿಸಿಗಳಿಗೆ ಕೆನೆಪದರವನ್ನು ಅನ್ವಯಿಸಲು ಶಿಫಾರಸು ಮಾಡಿತ್ತು, ಇದು ಕಳೆದ ಶುಕ್ರವಾರ ನಡೆದ ಸಚಿವ ಸಂಪುಟದ ಕಾರ್ಯಸೂಚಿಗಳಲ್ಲಿ ಒಂದು ವಿಷಯವಾಗಿತ್ತು.
ಅಭ್ಯರ್ಥಿಗಳಿಗೆ ಕೆನೆಪದರದಿಂದ ವಿನಾಯಿತಿ ನೀಡುವ ಸುತ್ತೋಲೆಯನ್ನು ಸಚಿವ ಸಂಪುಟ ಸಭೆಗೆ ಒಂದು ದಿನ ಮೊದಲು ಅಂದರೆ ಗುರುವಾರ ಹೊರಡಿಸಲಾಗಿದೆ. ಸಂವಿಧಾನದ ವಿಧಿ 15(4) ಮತ್ತು 16(4) ರ ಅಡಿಯಲ್ಲಿ ನೇರ ನೇಮಕಾತಿಗಾಗಿ, ವರ್ಗ 2A, 2B, 3A, 3B ವರ್ಗಕ್ಕೆ ಸೇರಿದ ಅಭ್ಯರ್ಥಿಗಳು, ಕೆಳ ಹಂತದ ಹುದ್ದೆಗಳಲ್ಲಿ ನಿಗದಿತ-ನಿರ್ದಿಷ್ಟ ಅವಧಿಯ ಅನುಭವವನ್ನು ಹೊಂದಿದ್ದರೆ, ಅಂತಹ ಸಂದರ್ಭದಲ್ಲಿ ಅವರಿಗೆ ಕೆನೆಪದರ ನಿಯಮ ಅನ್ವಯಿಸುವುದಿಲ್ಲ ಎಂದು ಹಿಂದುಳಿದ ವರ್ಗಗಳ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
