ಉದಯವಾಹಿನಿ, ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜನರು ಭಾನುವಾರ ಬೆಳಗ್ಗೆ ಶಾಂತಯುತವಾಗಿ ಎಚ್ಚರಗೊಂಡರು. ಹಿಂದಿನ ದಿನದಂತೆ ಭಾರೀ ಸ್ಪೋಟಗಳು, ಸೈರನ್ ಗಳು ಮತ್ತು ಸ್ಫೋಟಗಳ ಶಬ್ದ ಅವರನ್ನು ಪೀಡಿಸಲಿಲ್ಲ. ಕದನ ವಿರಾಮ ಉಲ್ಲಂಘನೆ ಅಥವಾ ಡ್ರೋನ್ ದೃಶ್ಯಗಳ ಬಗ್ಗೆ ಯಾವುದೇ ಹೊಸ ವರದಿಗಳಿಲ್ಲದೆ ಸಹಜ ಪರಿಸ್ಥಿತಿ ಕಂಡುಬಂದಿದೆ.ಮಾರುಕಟ್ಟೆಯಲ್ಲಿ ಗರಿಗೆದರಿದ ಚಟುವಟಿಕೆ: ಶ್ರೀನಗರ ಮತ್ತು ಕಣಿವೆಯ ಇತರ ಭಾಗಗಳಲ್ಲಿನ ಮಾರುಕಟ್ಟೆಗಳು ಮತ್ತೆ ಚಟುವಟಿಕೆಯಿಂದ ಕೂಡಿದ್ದವು, ಜನರು ಡ್ರೋನ್ ದಾಳಿಯ ಭಯವಿಲ್ಲದೆ ಶಾಪಿಂಗ್ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
ಶ್ರೀನಗರ ಮತ್ತು ಪಕ್ಕದ ಪ್ರದೇಶಗಳಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದವು. ಸ್ಫೋಟದ ನಂತರ ತಕ್ಷಣವೇ ಕತ್ತಲೆಯಾದ ಕಾರಣ ನನ್ನ ಮಕ್ಕಳು ಭಯಭೀತರಾಗಿದ್ದರು” ಇವೆಲ್ಲಾ ಸಾಮಾನ್ಯ ಎಂದು ನನ್ನ ಮಕ್ಕಳಿಗೆ ಮನವರಿಕೆ ಮಾಡಲು ಸಾಕಷ್ಟು ಪ್ರಯತ್ನ ಮಾಡಿದೆ ಎಂದು ಶ್ರೀನಗರದ ಹೊರವಲಯದ ನಿವಾಸಿ ಮುಷ್ತಾಕ್ ಅಹ್ಮದ್ ಹೇಳಿದರು. ಭಾರೀ ಸ್ಫೋಟಗಳು ಕೇಳಿಬಂದವು, ಬಹುಶಃ ಡ್ರೋನ್‌ಗಳು ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಿದ್ದು, ಜನರಲ್ಲಿ ಭಯ ಕಾಡುತಿತ್ತು. ಕಳೆದ ರಾತ್ರಿ ಶಾಂತಯುತವಾಗಿತ್ತು ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಇದ್ದು, ಉಭಯ ರಾಷ್ಟ್ರಗಳು ತಮ್ಮ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಶ್ರೀನಗರ ನಿವಾಸಿ ಮೆಹರಾಜ್-ಉದ್-ದಿನ್ ಹೇಳಿದ್ದಾರೆ.
