ಉದಯವಾಹಿನಿ, ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ನಮ ಪಾತ್ರವಿತ್ತು ಎಂದು ಪಾಕ್‌ ಒಪ್ಪಿಕೊಂಡಿದೆ. ಪುಲ್ವಾಮಾ ಘಟನೆಯಲ್ಲಿ ನಮ ಪಾತ್ರವಿಲ್ಲ ಎಂದು ವರ್ಷಗಳ ಕಾಲ ನಿರಾಕರಿಸಿಕೊಂಡೇ ಬರುತ್ತಿದ್ದ ಪಾಕ್‌ನ ಉನ್ನತ ವಾಯುಪಡೆಯ ಅಧಿಕಾರಿಯೇ ತಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನ ವಾಯುಪಡೆಯ ವಾಯು ವೈಸ್‌‍ ಮಾರ್ಷಲ್‌ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕ (ಡಿಜಿಪಿಆರ್‌) ಔರಂಗಜೇಬ್‌ ಅಹ್ಮದ್‌ ಪತ್ರಿಕಾಗೋಷ್ಠಿಯಲ್ಲಿ, ಪುಲ್ವಾಮಾ ದಾಳಿಯನ್ನು ಯುದ್ಧತಂತ್ರದ ಪ್ರತಿಭೆಗೆ ಒಂದು ಉದಾಹರಣೆ ಎಂದು ಹೇಳಿದ್ದಾರೆ. ಈ ಹೇಳಿಕೆಯು ಪುಲ್ವಾಮಾ ದಾಳಿಯಲ್ಲಿ ಮಾತ್ರವಲ್ಲದೆ ಇತ್ತೀಚಿನ ಪಹಲ್ಗಾಮ್‌ ದಾಳಿಯಲ್ಲೂ ಪಾಕಿಸ್ತಾನದ ಪಾತ್ರದ ಬಗ್ಗೆ ಅನುಮಾನಗಳನ್ನು ದೃಢಪಡಿಸುತ್ತಿದೆ. ಔರಂಗಜೇಬ್‌ ಅಹ್ಮದ್‌ ಅವರ ಈ ಹೇಳಿಕೆಯು ಪಾಕಿಸ್ತಾನದ ವರ್ಷಗಳ ಹಳೆಯ ಕಥೆಯನ್ನು ತಲೆಕೆಳಗೆ ಮಾಡಿದಂತಾಗಿದೆ.

Leave a Reply

Your email address will not be published. Required fields are marked *

error: Content is protected !!