ಉದಯವಾಹಿನಿ, ಹಾಸನ:  ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಗರದಲ್ಲಿ ಕಸದ ಸಮಸ್ಯೆ ಉಲ್ಬಣಿಸುತ್ತಲೇ ಇದೆ. ನಗರದ ಒಳಗಡೆ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದ್ದು ನಗರದ ಹೊರವಲಯದ ವರ್ತುಲ ರಸ್ತೆಗಳಲ್ಲಿ ಕಸದ ರಾಶಿ ನಿತ್ಯ ಬೆಳೆಯುತ್ತಲೇ ಇದೆ.
ನಗರ ಸುತ್ತ ಒಂದು ಬಾರಿ ಪ್ರದಕ್ಷಿಣೆ ಹಾಕಿದರೆ ರಸ್ತೆ ಬದಿ, ಅಂಗಡಿ, ಖಾಲಿ ನಿವೇಶನ ಸೇರಿದಂತೆ ಎಲ್ಲೆಂದರಲ್ಲಿ ಕಸದ ರಾಶಿ ಕಾಣ ಸಿಗುತ್ತದೆ. ಬಹುತೇಕ ಕಸದ ರಾಶಿಯಲ್ಲಿ ಪ್ಲಾಸ್ಟಿಕ್ ಗುಡ್ಡವೇ ಎದುರಾಗುತ್ತದೆ. ನಗರಸಭೆಯಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸದೇ ಇರುವುದೇ ಈ ಎಲ್ಲ ಸಮಸ್ಯೆಗೆ ಕಾರಣ ಎಂದು ಜನರು ದೂರುವಂತಾಗಿದೆ.

ನಗರದ ಹೊರ ವರ್ತುಲ ರಸ್ತೆ, ಚನ್ನಪಟ್ಟಣ ನೂತನ ಬಸ್ ನಿಲ್ದಾಣದ ಸುತ್ತಲಿನ ರಸ್ತೆಗಳು, ವಿದ್ಯಾನಗರ, ವಿಜಯನಗರ, ಕೃಷ್ಣ ನಗರ ಮತ್ತು ದೇವೇಗೌಡ ನಗರ ಸಂಪರ್ಕ ರಸ್ತೆಗಳ ಅಕ್ಕಪಕ್ಕದಲ್ಲಿ, ಗುರು ಚಿತ್ರಮಂದಿರ ಹಿಂದಿನ ರಸ್ತೆ, ಗವೇನಹಳ್ಳಿ ಸಂಪರ್ಕ ರಸ್ತೆಯ ಅಕ್ಕ ಪಕ್ಕ, ಸಂತೆಪೇಟೆ ರಸ್ತೆ, ಬೇಲೂರು ರಿಂಗ್ಸ್ ರಸ್ತೆ, ಉದಯಗಿರಿಯಿಂದ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಅರಸೀಕೆರೆ ರಸ್ತೆಯ ಬಿ. ಕಾಟಿಹಳ್ಳಿ ಹತ್ತಿರ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆ ಬದಿ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯದ ದರ್ಶನವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!