ಉದಯವಾಹಿನಿ, ಬೆಂಗಳೂರು: ನಂಬಿಕೆಯ ಮೇಲೆ ಲೆಕ್ಕಪರಿಶೋಧಕರೊಬ್ಬರು ಕಾರಿನಲ್ಲಿಡಲು ನೀಡಿದ್ದ 1 ಕೋಟಿ 51 ಲಕ್ಷ ನಗದನ್ನು ದೋಚಿ ಪರಾರಿಯಾಗಿದ್ದ ಖತರ್ನಾಕ್ ಕಾರು ಚಾಲಕನನ್ನು ವೈಯಾಲಿಕಾವಲ್ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೈಯಾಲಿಕಾವಲ್ ನ ಟಿಟಿಡಿ ದೇವಸ್ಥಾನ ಬಳಿಯ ಕಾರು ಚಾಲಕ ರಾಜೇಶ್ (45)ಬಂಧಿತ ಆರೋಪಿಯಾಗಿದ್ದಾನೆ.ಬಂಧಿತ ಆರೋಪಿಯು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ 1 ಕೋಟಿ 48 ಲಕ್ಷ 36 ಸಾವಿರದ 500 ರೂಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೆÇಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೋದಂಡರಾಯಪುರದ ಟೆಂಪಲ್ ರಸ್ತೆಯ ಲೆಕ್ಕಪರಿಶೋಧಕ ತೋಟಪ್ರಸಾದ್ ಅವರು ಕಳೆದ ಮೇ.6 ರಂದು ವೈಯ್ಯಾಲಿಕಾವಲ್ ಠಾಣೆಗೆ ನೀಡಿದ ದೂರಿನಲ್ಲಿ ತಮ್ಮ ಕಾರು ಚಾಲಕನಿಗೆ, ಗ್ರಾಹಕರ ತೆರಿಗೆ ತುಂಬುವ 1.51 ಕೋಟಿ ರೂಗಳನ್ನು ಬ್ಯಾಂಕ್‍ಗೆ ಸಂದಾಯ ಮಾಡುವ ಸಲುವಾಗಿ ಕಾರಿನಲ್ಲಿಡಲು ನೀಡಿದ್ದು, ಹಣವನ್ನು ಕಾರಿನಲ್ಲಿಡದೇ, ಆತನ ದ್ವಿ-ಚಕ್ರ ವಾಹನದಲ್ಲಿಟ್ಟುಕೊಂಡು ಪರಾರಿಯಾಗಿರುವುದಾಗಿ ತಿಳಿಸಿದ್ದರು. ಈ ಸಂಬಂಧ ವೈಯ್ಯಾಲಿಕಾವಲ್ ಪೆÇಲೀಸರು ಪ್ರಕರಣ ದಾಖಲಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಕಾರು ಚಾಲಕನಿಗೆ ನೋಟಿಸ್ ಜಾರಿದ್ದು, ಠಾಣೆಗೆ ಹಾಜರಾದ ಆತ ವಿಚಾರಣೆಯಲ್ಲಿ ನಗದನ್ನು ಕಳುವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ ಎಂದರು. ಕಳುವು ಮಾಡಿದ್ದ ನಗದನ್ನು ಟಿ.ಟಿ.ಡಿ ದೇವಸ್ಥಾನದ ಬಳಿಯ ವಾಸದ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದು, ಅದೇ ದಿನ ಆರೋಪಿಯ ಮನೆಯಿಂದ 1,48,36,500 ನಗದನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!