ಉದಯವಾಹಿನಿ, ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ದೇಶವಿರೋಧಿ ಪೋಸ್ಟ್‌ಗಳನ್ನು ನಿರ್ಬಂಧಿಸುವ ಸಲುವಾಗಿ ವಿಸ್ತೃತವಾದ ಕಾರ್ಯಯೋಜನೆಯನ್ನು ರೂಪಿಸಲಾ ಗುತ್ತದೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಬಟನ್ ಒತ್ತಿದಾಕ್ಷಣ ಎಲ್ಲವನ್ನೂ ನಿಲ್ಲಿಸಲಾಗುವುದಿಲ್ಲ. ಪದ್ಧತಿಯ ಅನುಸಾರವೇ ಕ್ರಮ ಕೈಗೊಳ್ಳಬೇಕು. ಇದು ಸಣ್ಣ ವಿಚಾರವಲ್ಲ. ಮೇಲ್ನೋಟಕ್ಕೆ ಹೇಳಿದಷ್ಟು ಸರಳವಲ್ಲ ಎಂದರು. ವಿದೇಶದಲ್ಲಿ ಕುಳಿತು ಪೋಸ್ಟ್ ಮಾಡುತ್ತಾನೆ. ನಾವು ಇಲ್ಲಿ ಕಾನೂನು ಮಾಡಿದಾಕ್ಷಣ ವಿದೇಶದಲ್ಲಿರುವವರನ್ನು ನಿಂದಿಸುವುದು ಸರಿಬರುವುದಿಲ್ಲ. ಈಗಾಗಲೇ ಸೈಬರ್ ವಿಭಾಗದ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡಲಾಗಿದೆ. ನಾವು ಅಪರಾಧಗಳನ್ನು ಪತ್ತೆಹಚ್ಚಲು ಶುರು ಮಾಡಿದಂತೆ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ನಮಗೆ ಸಂಖ್ಯೆ ಮುಖ್ಯವಲ್ಲ. ಇಂತಹುದನ್ನು ನಿಲ್ಲಿಸಬೇಕು ಎಂದರು. ಅವಹೇಳನ, ಕೋಮುದ್ವೇಷ, ವೈಯಕ್ತಿಕ ಟೀಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕಡಿವಾಣ ಹಾಕಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.ಮಂಗಳೂರಿನ ಸುಹಾಸ್‌ಶೆಟ್ಟಿ ಪ್ರಕರಣವನ್ನು ಎನ್‌ಐಎಗೆ ನೀಡುವ ಅಗತ್ಯವಿಲ್ಲ. ಆದರೆ ರಾಜ್ಯಪಾಲರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನಮಗೆ ಗೊತ್ತಿಲ್ಲ ಎಂದರು. ಕರಾವಳಿಯ ಉಡುಪಿ, ದ.ಕನ್ನಡ ಜಿಲ್ಲೆಗಳಲ್ಲಿ ಕೋಮು ಚಟುವಟಿಕೆಗಳನ್ನು ನಿಗ್ರಹಿಸಲು ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪಡೆ ರಚನೆಗೆ ಪ್ರಸ್ತಾವನೆ ಬಂದಿದೆ. ಚರ್ಚೆ ಮಾಡಿ 2-3 ದಿನಗಳಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.ಬಿಜೆಪಿಯವರು ಪ್ರಸ್ತಾವನೆ ಕಳುಹಿಸಿರುವುದು ಇಂದು ಬೆಳಿಗ್ಗೆ ನಮಗೆ ತಲುಪಿದೆ ಎಂದು ಸ್ಪಷ್ಟಪಡಿಸಿದರು.
