ಉದಯವಾಹಿನಿ, ಮಂಗಳೂರು: ಉಗ್ರವಾದದ ದಮನ ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಪಹಲ್ಗಾಮ್‌ ದಾಳಿ ಮತ್ತು ಅದರ ನಂತರ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ದೇಶದ ಜನರಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಆಗ್ರಹಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ವಿಷಯದಲ್ಲಿ ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ನಿಲುವಿಗೆ ಬೆಂಬಲ ವ್ಯಕ್ತ ಪಡಿಸಲಿದೆ. ಆದರೆ ಪ್ರಧಾನಿಯವರು ಯಾವ ವಿಚಾರವನ್ನೂ ಜನರಿಗೆ ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಜನರನ್ನು ಕತ್ತಲಿನಲ್ಲಿ ಇಟ್ಟಿದ್ದಾರೆ ಎಂದು ಆರೋಪಿಸಿದರು.ದೇಶಕ್ಕೆ ತಿಳಿಸಬೇಕಾದ ವಿಚಾರ ಗಳನ್ನು ರಾಜಕೀಯ ಹೊರತಾಗಿ ತಿಳಿಸಬೇಕು. ಪಾಕಿಸ್ತಾನವು ಭಾರತದ ಐದು ವಿಮಾನಗಳನ್ನು ಹೊಡೆದಿರುಳಿ ಸಿರುವುದಾಗಿ ಹೇಳುತ್ತಿದೆ.ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ ಉಗ್ರರು ಏನಾದರೂ ಎಂಬ ವಿಚಾರಗಳು ಜನರಿಗೆ ತಿಳಿಯಬೇಕು. ಪ್ರಧಾನಿ ನರೇಂದ್ರ ಮೋದಿಯವರು ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಅಮೇರಿಕಾದ ಅಧ್ಯಕ್ಷರು ಪ್ರತಿದಿನ ಮಾಧ್ಯಮಗಳಿಗೆ ಉತ್ತರ ನೀಡುತ್ತಾರೆ. ಮೋದಿ ಅವರು ಗೋಧಿ ಮೀಡಿಯಾಗಳು ನನ್ನ ಕೈಯಲ್ಲಿದೆ ಎಂಬ ಕಾರಣಕ್ಕೆ ಪತ್ರಿಕಾಗೋಷ್ಠಿಯನ್ನೇ ನಡೆಸು ವುದಿಲ್ಲ.ಯಾರಿಗೂ ಕೇರ್‌ ಮಾಡುವುದಿಲ್ಲ. ಮೋದಿ ಅವರು ಏಕಮುಖವಾಗಿ ಟಿವಿಗಳಲ್ಲಿ ಕುಳಿತು ಭಾಷಣ ಮಾಡುವುದಷ್ಟೇ ನಮಗೆ ಗೊತ್ತು. ಮೋದಿ ಮಹಾನ್‌ ಸುಳ್ಳುಗಾರ, ಸುಳ್ಳಿನ ದಂತಕತೆಗಳನ್ನು ಕಟ್ಟುವ ಸಾಮರ್ಥ್ಯವಿದೆ. ಅದರ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ದೇಶದ ವಿಚಾರ ಬಂದಾಗ ಪರಸ್ಪರ ವಿಶ್ವಾಸ, ಪಾರದರ್ಶಕತೆ ಅಗತ್ಯ. ವಿರೋಧ ಪಕ್ಷಗಳಿಗೆ ಹಾಗೂ ದೇಶದ ಜನತೆಗೆ ನಂಬಿಕೆ ಬರುವಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

 

Leave a Reply

Your email address will not be published. Required fields are marked *

error: Content is protected !!