ಉದಯವಾಹಿನಿ, ಬೆಂಗಳೂರು : ಭಾರತವು ಅಪರೇಷನ್ ಸಿಂಧೂರ್‌ನಲ್ಲಿ ಪಡೆದ ಯಶಸ್ಸಿಗೆ ಶಬ್ದಾತೀತವೇಗದ ಬ್ರಹ್ಮೋಸ್ ಕ್ಷಿಪಣಿ ಬಳಕೆ ಮಾಡಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಇದು ಈಗ ಜಗತ್ತಿನ ಗಮನ ಸೆಳೆದಿದೆ. ಏಷ್ಯಾ, ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತದ ದೇಶಗಳು ಈಗ ಈ ಶಕ್ತಿಶಾಲಿ ಕ್ಷಿಪಣಿ ಖರೀದಿಸಲು ಆಸಕ್ತಿ ತಳೆದಿವೆ. ಬ್ರಹ್ಮಸ್ ಕ್ಷಿಪಣಿ ಎಂದರೇನು…? ಬ್ರಹ್ಮೋಸ್ ಒಂದು ದೀರ್ಘ ವ್ಯಾಪ್ತಿಯ ಶಬ್ದಾತೀತ ವೇಗದ ಸಮರ ಕ್ಷಿಪಣಿಯಾಗಿದ್ದು ಇದನ್ನು ಭಾರತದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮತ್ತು ರಷ್ಯಾದ ಎನ್‌ಪಿಓಎಂ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದನ್ನು ನೆಲದಿಂದ, ಗಾಳಿಯಲ್ಲಿ, ಸಮುದ್ರದಿಂದ ಅಥವಾ ಜಲಾಂತರ್ಗಾಮಿಯಿಂದ ಹೇಗೆ ಬೇಕಾದರೂ ಉಡಾವಣೆ ಮಾಡಬಹುದಾಗಿದೆ. ಮಾರ್ಚ್ 3 ರವರೆಗಿನ ವೇಗದಲ್ಲಿ ಇದು ಪಯಣಿಸಬಲ್ಲದು. ಇದು ಫೈರ್ ಆ್ಯಂಡ್ ಫರ್ಗೆಟ್ ಮಾದರಿಯನ್ನು ಹೈ ಪ್ರಿಸಿಷನ್‌ನೊಂದಿಗೆ ಅನುಸರಿಸುತ್ತದೆ.
ಈ ಕ್ಷಿಪಣಿ ಎರಡು ಹಂತಗಳಲ್ಲಿ ಚಲಿಸುತ್ತದೆ. ಉಡಾವಣೆಗೆ ಘನ ಬೂಸ್ಟರ್ ಅನ್ನು ಮತ್ತು ಅತಿವೇಗದ ಚಲನೆಗೆ ದ್ರವ ಲ್ಯಾಮ್‌ಜೆಟ್ ಅನ್ನು ಇದು ಬಳಕೆ ಮಾಡುತ್ತದೆ. 15 ಕಿ.ಮೀ. ಎತ್ತರದಲ್ಲಿ ಹಾರುವ ಇದು ನೆಲದಿಂದ ಕೇವಲ 10 ಮೀಟರ್ ಎತ್ತರದಲ್ಲೂ ಹಾರುವ ಸಾಮರ್ಥ್ಯ ಹೊಂದಿದೆ. ಇದನ್ನು ಪತ್ತೆ ಮಾಡುವುದು ಕಷ್ಟಕರ. ತಡೆಯುವುದು ಇನ್ನೂ ಕಷ್ಟಸಾಧ್ಯ.

Leave a Reply

Your email address will not be published. Required fields are marked *

error: Content is protected !!