ಉದಯವಾಹಿನಿ, ಬೆಂಗಳೂರು: ಮಹಾರಾಷ್ಟ್ರ ಸಿಎಂ ಆಲಮಟ್ಟಿ ಜಲಾಶಯದ ಎತ್ತರದ ಬಗ್ಗೆ ತಕರಾರು ಮಾಡಿರುವುದು ಅಸಮಂಜಸ ಮತ್ತು ರಾಜಕೀಯ ಪ್ರೇರಿತ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ಆಲಮಟ್ಟಿ ಸಂಪೂರ್ಣ ಕೃಷ್ಣಾ ಜಲಾನಯನ ಪ್ರದೇಶದ ಒಂದು ಪ್ರಮುಖ ನೀರು ಸಂಗ್ರಹ ಮತ್ತು ವಿತರಣೆಯ ವಾಟರ್ ಗ್ರಿಡ್ ಆಗಿದೆ. ಉತ್ತರ ಕರ್ನಾಟಕದ ಜೀವನದಿಗೆ ಹೃದಯ ಭಾಗವಾಗಿದೆ. ಆಲಮಟ್ಟಿ ಎತ್ತರದ ಬಗ್ಗೆ ಕರ್ನಾಟಕದ ಮೂಲ ಕೃಷ್ಣಾ ಜಲಾನಯನ ಯೋಜನೆಯಲ್ಲಿ ಅಳವಡಿಸಿದೆ. ಮತ್ತು ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಕೊಟ್ಟಿದೆ. ಅದರ ಪ್ರಕಾರ 524.25 ಮೀಟರ್ ಎಂಬುದು ಮೂಲ ಯೋಜನೆಯಲ್ಲಿ ಇದ್ದು ತದ ನಂತರ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ತಕರಾರು ಆದಮೇಲೆ ಕೆಡಬ್ಲುಡಿಟಿ 1 (ಕೃಷ್ಣಾ ವಾಟರ್ ಡಿಸ್ಪ್ಯೂಟ್ ಟ್ರಿಬ್ಯುನಲ್), ನೀರನ್ನು ಉಪಯೋಗ ಮಾಡಲು 519.6 ಮೀಟರ್‌ಗೆ ಸೀಮಿತಗೊಳಿಸಿ ಉಪಯೋಗಿಸಲು ಸುಪ್ರೀಂ ಕೋರ್ಟ್ ಕೂಡ ಒಪ್ಪಿದೆ. ಸ್ಕಿಂ ಬಿಯಲ್ಲಿ ಕೆಡಬ್ಲುಡಿಟಿ 2, ( ಕೃಷ್ಣಾ ವಾಟರ್ ಡಿಸ್ಪ್ಯೂಟ್ ಟ್ರಿಬ್ಯುನಲ್ 2)ನಲ್ಲಿ ನಮಗೆ ನೀರು ಹಂಚಿಕೆಯಾಗಿರುವ 173 ಟಿಎಂಸಿಯನ್ನು 519 ರಿಂದ 524 ರಲ್ಲಿ ಪಡೆದುಕೊಳ್ಳಬಹುದೆಂದು ಕೆಡಬ್ಲುಡಿಟಿ 2 ಅಂತಿಮ ಟ್ರಿಬ್ಯುನಲ್ ಆದೇಶದಲ್ಲಿದೆ ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!