ಉದಯವಾಹಿನಿ, ವಾಷಿಂಗ್ಟನ್: “ವಿದೇಶಿ ಭಯೋತ್ಪಾದಕರು” ಮತ್ತು ದೇಶದ ಭದ್ರತಾ ಬೆದರಿಕೆ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ, ಮ್ಯಾನ್ಮಾರ್ ಸೇರಿದಂತೆ 12 ರಾಷ್ಟ್ರಗಳ ಪ್ರಜೆಗಳು ಅಮೇರಿಕಾಕ್ಕೆ ಬರುವುದಕೆ ನಿರ್ಬಂಧಿಸಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ.ಅಫ್ಘಾನಿಸ್ತಾನ, ಮ್ಯಾನ್ಮಾರ್ ಅಲ್ಲದೆ ಚಾಡ್, ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮೆನ್ ದೇಶದ ಪ್ರಜೆಗಳಿಗೆ ಅಮೇರಿಕಾದ ಬಾಗಿಲು ಬಂದ್ ಮಾಡಿ ಆದೇಶಿಸಿದ್ಧಾರೆ
12 ದೇಶಗಳ ಜನರು ಅಮೇರಿಕಾಕ್ಕೆ ಬರುವುದನ್ನು ನಿರ್ಬಂಧಿಸಿದ ಆದೇಶಕ್ಕೆ ಸಹಿಹಾಕಿದ್ದು ಈ ಆದೇಶ ಜೂನ್ 9 ರಿಂದ ಈ ಆದೇಶ ಜಾರಿ ಬರಲಿದೆ. ಇನ್ನು ಮುಂದೆ ಮುಂದಿನ ಆದೇಶದ ತನಕ ನಿಯಮ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ
ಈಗಾಗಲೇ ಬುರುಂಡಿ, ಕ್ಯೂಬಾ, ಲಾವೋಸ್, ಸಿಯೆರಾ ಲಿಯೋನ್, ಟೋಗೊ, ತುರ್ಕಮೆನಿಸ್ತಾನ್ ಮತ್ತು ವೆನೆಜುವೆಲಾ ಸೇರಿದಂತೆ ಏಳು ಇತರ ದೇಶಗಳ ಜನರ ಪ್ರವೇಶಕ್ಕೆ ಈಗ ಭಾಗಶ: ನಿರ್ಬಂಧಿಸಲಾಗಿದೆ. ಇದರ ಜೊತೆಗೆ ಇನ್ನೂ 12 ದೇಶಗಳ ಜನ ಪ್ರಯಾಣ ನಿರ್ಬಂಧ ವಿಧಿಸಲಾಗಿದೆ ಎಂದಿದ್ದಾರೆ
ದೇಶಕ್ಕೆ ಹಾನಿ ಮಾಡುವ ಯಾವುದೇ ದೇಶದ ಜನರು ಅಮೇರಿಕಾಕ್ಕೆ ಬರುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಮಗೆ ನಮ್ಮ ದೇಶ ಮುಖ್ಯ, ದೇಶದ ಭದ್ರತೆ ಸುರಕ್ಷತೆ ಮುಖ್ಯ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
