
ಉದಯವಾಹಿನಿ, ಲಂಡನ್: ಗಾಜಾಗೆ ಹಾಲು, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊತ್ತು ಸ್ವೀಡನ್ನ ಹವಾಮಾನ ಹೋರಾಟಗಾರ್ತಿ ಧನ್‌ಬರ್ಗ್(22) ಹಡಗೊಂದರಲ್ಲಿ ಪ್ರಯಾಣ ಆರಂಭಿಸಿದ್ದಾರೆ. ಸಿಸಿಲಿ ಬಂದರಿನಿಂದ ನೌಕೆಯು ಪ್ರಯಾಣ ಆರಂಭಿಸಿದ್ದು 2 ಸಾವಿರ ಕಿ.ಮೀ. ದೂರ ಪ್ರಯಾಣಿಸಿ ಗಾಜಾವನ್ನು ತಲುಪಲಿದೆ. ಗಾಜಾಗೆ ಮಾನವೀಯ ನೆರವಿನ ನಿರ್ಬಂಧ ಹಾಗೂ ಯುದ್ಧಾಪರಾಧವನ್ನು ವಿರೋಧಿಸಿ ಶಾಂತಿಯ ಹೋರಾಟದ ರೂಪದಲ್ಲಿ ಕ್ರಮ ಕೈಗೊಂಡಿರುವುದಾಗಿ ಗ್ರೆಟಾ ಹೇಳಿದ್ದಾರೆ. ಈಕೆಗೆ ಇನ್ನೂ 12 ಮಂದಿ ಅಂತಾರಾಷ್ಟ್ರೀಯ ಹೋರಾಟಗಾರರು ಸಾಥ್ ನೀಡಿದ್ದಾರೆ. ಇನ್ನೊಂದೆಡೆ, ಇವರ ಪ್ರಯಾಣಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್, “ನಾವು ಎಲ್ಲದಕ್ಕೂ ಸನ್ನದ್ಧರಾಗಿದ್ದೇವೆ’ ಎಂದಿದೆ. ಆದರೆ, ಹೋರಾಟಗಾರರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಇಸ್ರೇಲ್ ತಿಳಿಸಿಲ್ಲ. ಈ ಬೆಳವಣಿಗೆ ಈಗ ಇಡೀ ಜಗತ್ತಿನ ಗಮನ ಸೆಳೆದಿದೆ.
