ಉದಯವಾಹಿನಿ, ಟೋಕಿಯೋ: ಜಪಾನ್‌ನಲ್ಲಿ ವಾರ್ಷಿಕ ಜನನ ಪ್ರಮಾಣ ಮತ್ತಷ್ಟು ಇಳಿಕೆಯಾಗುತ್ತಿದ್ದು, 2024ರಲ್ಲಿ ನಿರೀಕ್ಷೆಗಿಂತ ವೇಗವಾಗಿ ಜನನ ಪ್ರಮಾಣ ಇಳಿದಿದ್ದು, ಶತಮಾನದ ಕನಿಷ್ಠ ಮಟ್ಟದ ಕುಸಿತ ಕಂಡಿದೆ.ಜಪಾನ್‌ನ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ 2024ರಲ್ಲಿ ದೇಶದಲ್ಲಿ 6,86,061 ಮಕ್ಕಳು ಜನಿಸಿವೆ. ಇದು 2023ಕ್ಕೆ ಹೋಲಿಸಿದರೆ ಶೇ.5.7ರಷ್ಟು ಕಡಿಮೆ ಪ್ರಮಾಣವಾಗಿದೆ. ಜತೆಗೆ 1899ರ ಬಳಿಕ ಇದೇ ಮೊದಲ ಬಾರಿಗೆ ದೇಶವು 7 ಲಕ್ಷಕ್ಕೂ ಕಡಿಮೆ ಜನನ ಪ್ರಮಾಣ ದಾಖಲಿಸಿದೆ. ಹಾಗಾಗಿ ಇದನ್ನು ಶತಮಾನದ ಕನಿಷ್ಠ ದಾಖಲೆ ಎಂದು ಪರಿಗಣಿಸಲಾಗಿದೆ.

ಕಳೆದ 16 ವರ್ಷಗಳಿಂದಲೂ ಜಪಾನ್‌ನಲ್ಲಿ ಜನನ ಪ್ರಮಾಣ ಕುಸಿಯುತ್ತಲೇ ಇದೆ. ಅಲ್ಲದೇ ವೃದ್ಧರ ಸಂಖ್ಯೆಯ ಹೆಚ್ಚಳದಲ್ಲೂ ಜಪಾನ್ ದಾಖಲೆ ಬರೆಯುತ್ತಿದ್ದು, ಇಂತಹ ಸಮಯದಲ್ಲಿ ಜನನ ಪ್ರಮಾಣ ಕುಸಿತವು ಕಳವಳ ತಂದಿದೆ. ಪೂರ್ವ ಏಷ್ಯಾ ದೇಶಗಳ ಪೈಕಿ ಅತಿಹೆಚ್ಚು ಜನಸಂಖ್ಯಾ ಕುಸಿತ ಕಂಡ ದೇಶಗಳಲ್ಲಿ ಜಪಾನ್ ಸಹ ಒಂದು. ಈ ಹಿಂದೆ ಚೀನಾ, ದಕ್ಷಿಣ ಕೊರಿಯಾಗಳು ಸಹ ಸಾಕಷ್ಟು ವರ್ಷಗಳು ಸಮಸ್ಯೆ ಎದುರಿಸಿದ್ದು, ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಪ್ರೋತ್ಸಾಹಿಸುವ ಮೂಲಕ ಇತ್ತೀಚೆಗೆ ಸುಧಾರಣೆ ಕಂಡಿವೆ.

Leave a Reply

Your email address will not be published. Required fields are marked *

error: Content is protected !!