
ಉದಯವಾಹಿನಿ, ಬೊಗೋಟಾ: ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಉರಿಬೆ (ಮೇಲೆ ಶನಿವಾರ ಗುಂಡಿನ ದಾಳಿ ನಡೆದಿದೆ. ಬೊಗೋಟಾದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಮಿಗುಯೆಲ್ ಉರಿಬೆ ಮೇಲೆ ಗುಂಡು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಉರಿಬೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ದಕ್ಷಿಣ ಅಮೆರಿಕ ಖಂಡದಲ್ಲಿರುವ ಕೊಲಂಬಿಯಾದಲ್ಲಿ 2026ರಲ್ಲಿ ಚುನಾವಣೆ ನಡೆಯಲಿದೆ. ಮಿಗುಯೆಲ್ ಉರಿಬೆ ಸೆನೆಟರ್ ಆಗಿದ್ದು ಬಲಪಂಥೀಯ ರಾಜಕಾರಣಿಯಾಗಿದ್ದಾರೆ.
