ಉದಯವಾಹಿನಿ, ತಿರುವನಂತಪುರಂ: ವಿಶ್ವದ ಅತಿದೊಡ್ಡ ಕಂಟೇನರ್ ಹಡಗು ಎಂಎಸ್‌ಸಿ ಐರಿನಾ ಸೋಮವಾರ ಬೆಳಿಗ್ಗೆ ವಿಳಿಂಜಂ ಅಂತರರಾಷ್ಟ್ರೀಯ ಬಂದರಿಗೆ ಆಗಮಿಸಿದೆ. MSC IRINA ಸೋಮವಾರ ಬೆಳಿಗ್ಗೆ 8 ಗಂಟೆಗೆ ವಿಳಿಂಜಂ ಬಂದರಿಗೆ ಆಗಮಿಸಿದ್ದು, ಜಲ ಗೌರವ ನೀಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಎಂಎಸ್‌ಸಿ ಐರಿನಾ 24,346 TEU ಸಾಮರ್ಥ್ಯವನ್ನು ಹೊಂದಿದ್ದು ಮಂಗಳವಾರದವರೆಗೆ ಈ ಬಂದರಿನಲ್ಲಿ ತಂಗುವ ನಿರೀಕ್ಷೆಯಿದೆ. 399.9 ಮೀಟರ್ ಉದ್ದ ಮತ್ತು 61.3 ಮೀಟರ್ ಅಗಲವಿರುವ ಈ ಹಡಗು FIFA ನಿಗದಿ ಮಾಡಿದ ಫುಟ್‌ಬಾಲ್ ಮೈದಾನಕ್ಕಿಂತ ಸರಿಸುಮಾರು ನಾಲ್ಕು ಪಟ್ಟು ಉದ್ದವನ್ನು ಹೊಂದಿದೆ.
24,346 TEU ಸಾಮರ್ಥ್ಯವಿರುವ ವಿಶ್ವದ ಅತಿದೊಡ್ಡ ಕಂಟೇನರ್ ಹಡಗಾಗಿರುವ MSC ಐರಿನಾವನ್ನು ನಮ್ಮ ವಿಳಿಂಜಂ ಬಂದರಿಗೆ ಸ್ವಾಗತಿಸಲು ಹೆಮ್ಮೆಪಡುತ್ತೇವೆ. ದಕ್ಷಿಣ ಏಷ್ಯಾದ ಬಂದರಿಗೆ ಮೊದಲ ಬಾರಿ ಆಗಮಿಸಿದೆ. ಜಾಗತಿಕ ಟ್ರಾನ್ಸ್‌ಶಿಪ್‌ಮೆಂಟ್‌ನಲ್ಲಿ ಪ್ರಮುಖ ದೇಶವಾಗಿ ಭಾರತ ಹೊರಹೊಮ್ಮಲು ಇದೊಂದು ದೊಡ್ಡ ಮೈಲಿಗಲ್ಲು ಎಂದು ಅದಾನಿ ಬಂದರಿನ ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
