ಉದಯವಾಹಿನಿ, ವಾಷಿಂಗ್ಟನ್: ಈ ಹಿಂದೆ ಅನೇಕ ಬಾರಿ ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ದೈಹಿಕ ಕ್ಷಮತೆಯ ಬಗ್ಗೆ ಕುಹಕವಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತಾವೇ ಪೇಚಿಗೆ ಸಿಲುಕಿದ್ದಾರೆ. ಹೌದು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ (ಜೂ8) ನ್ಯೂಜೆರ್ಸಿಯ ಮಾರಿಸ್ಟೌನ್‌ನಲ್ಲಿರುವ ಮಾರಿಸ್ಟೌನ್ ಮುನ್ಸಿಪಲ್ ವಿಮಾನ ನಿಲ್ದಾಣದಿಂದ ಹೊರಡುವ ವೇಳೆ, ಏರ್‌ಫೋರ್ಸ್ ಒನ್ ಮೆಟ್ಟಿಲುಗಳನ್ನು ಹತ್ತುವಾಗಿ ಎಡವಿದ್ದಾರೆ. ಎಡವಿ ಬಿದ್ದ ಟ್ರಂಪ್ ಪುನಃ ತಮ್ಮನ್ನು ಸಾವರಿಸಿಕೊಂಡು, ಮೇಲೆದ್ದು ವಿಮಾನ ಹತ್ತಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಟ್ರಂಪ್ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ.
ಮಾರಿಸ್ಟೌನ್ ಮುನ್ಸಿಪಲ್ ವಿಮಾನ ನಿಲ್ದಾಣದಿಂದ ಕ್ಯಾಂಪ್ ಡೇವಿಡ್‌ಗೆ ಪ್ರಯಾಣ ಬೆಳೆಸುತ್ತಿದ್ದ ಟ್ರಂಪ್, ಏರ್‌ಫೋರ್ಸ್ ಒನ್ ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಈ ಪ್ರಸಂಗ ನಡೆದಿದೆ. ಟ್ರಂಪ್ ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಟೀಕಿಸಲು ಶುರು ಮಾಡಿದ್ದಾರೆ.
