ಉದಯವಾಹಿನಿ, ಚಿತ್ರದುರ್ಗ: ಜೂ.09: ಜೂನ್ ಬರುವ ತಾರೀಖು 21ರ ಶನಿವಾರದಂದು ಆಚರಿಸಲಾಗುವ 11ನೇ ವಿಶ್ವ ಯೋಗ ದಿನಾಚರಣೆ ದಶಮಾನೋತ್ಸವ ಕಾರ್ಯಕ್ರಮ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆ ನೇತೃತ್ವದಲ್ಲಿ ಹಮ್ಕಿಕೊಂಡಿರುವ ಜಿಲ್ಲಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಗರದ ಜಿಲ್ಲಾ ಆಯುಷ್ ಕಛೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್. ನಾಗಸಮುದ್ರ ಸಭೆಯನ್ನುದ್ಧೇಶಿಸಿ ಮಾತನಾಡಿ ಈ ಬಾರಿ ವಿಶ್ವ ಯೋಗ ದಿನಾಚರಣೆಗೆ ಹತ್ತು ವರ್ಷಗಳು ತುಂಬಿ ಹನ್ನೊಂದನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಯೋಗ ದಿನಾಚರಣೆ ದಶಮಾನೋತ್ಸವ ಕಾರ್ಯಕ್ರಮವನ್ನು ಆಯುಷ್ ಇಲಾಖೆಯಿಂದ ಜೂನ್21ರ ಶನಿವಾರ ನಗರದ ಹೃದಯ ಭಾಗದಲ್ಲಿರುವ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು ಹಾಗೂ ಯೋಗ ದಿನಾಚರಣೆ ದಶಮಾನೋತ್ಸವ ಬಗ್ಗೆ ಜನರಲ್ಲಿ ಜಾಗೃತಿ ಮುಇಡಿಸುವ ಸಲುವಾಗಿ ದಿನಾಂಕ 19 ಗುರುವಾರದಂದು ಬೆಳಿಗ್ಗೆ 7ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಮುಭಾಗದಿಂದ ನಗರದೆಲ್ಲೆಡೆ ಯೋಗ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿವಿಧ ಇಲಾಖೆಗಳು ಹಾಗೂ ಮುಖ್ಯವಾಗಿ ಜಿಲ್ಲೆಯ ಯೋಗ ಸಾಧಕರ ಸಹಕಾರ ಅಗತ್ಯವಾಗಿದೆ ಎಲ್ಲರೂ ಜಿಲ್ಲಾ ಆಯುಷ್ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.

ವಿಶ್ವ ಯೋಗ ದಿನಾಚರಣೆ ದಶಮಾನೋತ್ಸವ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿ ಮಾತನಾಡಿದ ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ.ಶಿವಕುಮಾರ್ ಟಿ. ಮಾತನಾಡಿ ಯೋಗ ದಿನಾಚರಣೆ ದಶಮಾನೋತ್ಸವ ಅಂಗವಾಗಿ ಈ ಬಾರಿ ಹತ್ತು ದಿನಗಳು ಯೋಗವನ್ನು ಹೆಚ್ಚು ಪ್ರಚುರಪಡಿಸಲು 10 ಯಶಸ್ವಿ ಯೋಗದಿನಾಚರಣೆ ಆಚರಿಸಿದ 10 ಪ್ರಯುಕ್ತ ವಿಶಿಷ್ಠ ಕಾರ್ಯಕ್ರಮಗಳು ಯೋಗ ಸಂಗಮ, ಯೋಗ ಸಂಧಾನ ಯೋಗ ಬಂಧನ ಹರಿತ್ ಯೋಗ ಯೋಗೋದ್ಯಾನ , Yoga un plugged ಯೋಗ ಧನುಷ್ ಯೋಗ ಮಹಾಕುಂಬ್, ಯೋಗ ಪ್ರಭಾವ, ಯೋಗ ಸಂಗಮ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಸಕ್ರೀಯವಾಗಿ ಪಾಲ್ಗೊಂಡು ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನಗರದ ವಿವಿಧ ಯೋಗ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಆಯುಷ್ ವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!