ಉದಯವಾಹಿನಿ, ಶಿಲ್ಲಾಂಗ್: ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆರೋಪಿ ಪತ್ನಿ ಸೋನಂ ರಘುವಂಶಿಯ ಕರಾಳ ಮುಖಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ʻಬಾ ನಲ್ಲ ಮಧುಚಂದ್ರಕೆʼ ಅಂತ ಕರೆದೊಯ್ದು ಗಂಡನಿಗೆ ಚಟ್ಟಿದ ಸೋನಂ ಪ್ರಿಯಕರನಿಗಾಗಿ ವಿಧವೆ ಆಗೋದಕ್ಕೂ ರೆಡಿ ಇದ್ದಳಂತೆ ಅನ್ನೋದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಸಲಿಗೆ ರಾಜ ರಘುಂವಶಿಯನ್ನ ಕೊಂದು ಇಡೀ ಪ್ರಕರಣವನ್ನ ದರೋಡೆಯಂತೆ ಬಿಂಬಿಸುವುದು ಪ್ಲ್ಯಾನ್ ಆಗಿತ್ತು. ಸೋಮಂ ಕೂಡ ಈ ಬಗ್ಗೆ ಪ್ರಿಯಕರ ರಾಜ್ ಕುಶ್ವಾಹಗೆ ತಿಳಿಸಿದ್ದಳು. ರಾಜನನ್ನು ಕೊಂದು ಅದನ್ನ ದರೋಡೆಯಂತೆ ಬಿಂಬಿಸೋಣ. ನಾನು ವಿಧವೆಯಾದ್ಮೇಲೆ ನನ್ನ ತಂದೆ ನನ್ನನ್ನ ನಿನಗೇ ಕೊಟ್ಟು ಮದುವೆ ಮಾಡ್ತಾರೆ ಅಂತಲೂ ಹೇಳಿದ್ದಳಂತೆ ವಂಚಕಿ. ಇದಕ್ಕೆ ರಾಜ್ ಸಹ ಒಪ್ಪಿಕೊಂಡಿದ್ದನಂತೆ.
