ಉದಯವಾಹಿನಿ, ಬೆಂಗಳೂರು: ರೋಡು.. ಪಾರ್ಕು ಅಂತ ನೋಡದೇ ಸಿಕ್ಕ ಸಿಕ್ಕ ಮಹಿಳೆಯರನ್ನ ತಬ್ಬಿಕೊಂಡು, ಮುತ್ತು ಕೊಡುತ್ತಿದ್ದ ಬೀದಿ ಕಾಮಣ್ಣನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಯ ಎದುರು ಹೆಣ್ಣುಮಕ್ಕಳು ಓಡಾಡೋದೇ ಕಷ್ಟ ಎನ್ನುವಂತಾಗಿತ್ತು. ರೋಡು, ಪಾರ್ಕು ಅಂತ ನೋಡ್ತಿರಲಿಲ್ಲ, ಬರುವ ಹೋಗುವ ಮಹಿಳೆಯರು ಹೆಣ್ಣುಮಕ್ಕಳನ್ನ ತಪ್ಪಿಕೊಂಡು ಬಲವಂತವಾಗಿ ತುಟಿಗೆ ಚುಂಬಿಸುತ್ತಿದ್ದ ಎಂದು ಪೊಲೀಸರಿಗೆ ಮಹಿಳೆಯೊಬ್ಬರು ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ.
ಜೂನ್ 6ರಂದು ಸಂಜೆ 7 ಗಂಟೆ ಸುಮಾರಿಗೆ ಕೂಕ್‌ಟೌನ್‌ನ ಮಿಲ್ಟನ್ ಪಾರ್ಕ್ ಬಳಿ ನಿಂತಿದ್ದ ಮಹಿಳೆಯೊಬ್ಬರ ಬಳಿ ಕಾಮುಕ ದುರ್ವರ್ತನೆ ತೋರಿದ್ದ ಘಟನೆ ಬೆಳಕಿಗೆ ಬಂದಿತ್ತು. ಮಹಿಳೆಯನ್ನ ತಬ್ಬಿಕೊಂಡ ಕಾಮುಕ ಬಲವಂತವಾಗಿ ತುಟಿಗೆ ಮುತ್ತುಕೊಟ್ಟಿದ್ದನಂತೆ. ಮತ್ತೊಂದು ಪಾರ್ಕ್‌ನಲ್ಲೂ ಮಹಿಳೆಯೊಬ್ಬರ ಬಳಿ ಇದೇ ರೀತಿ ವರ್ತಿಸಿದ್ದನಂತೆ. ಮಹಿಳೆ ಪ್ರಶ್ನೆ ಮಾಡಿದ್ರೆ ಯಾರಿಗೆ ಬೇಕಾದ್ರೋ ಹೇಳಿಕೊ ಅಂತ ಎಸ್ಕೇಪ್ ಆಗ್ತಿದ್ದನಂತೆ. ಈ ಕುರಿತು ಸಂತ್ರಸ್ತ ಮಹಿಳೆ ಪುಲಕೇಶಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
