ಉದಯವಾಹಿನಿ,ಬೆಂಗಳೂರು: ಇಂದು (ಜೂನ್ 18) ವಿಶ್ವ ಅಪ್ಪಂದಿರ ದಿನ. ಆ ಹಿನ್ನೆಲೆಯಲ್ಲಿ ತಮ್ಮ ಫ್ಯಾಮಿಲಿಯ ಕೆಲವು ವಿಶೇಷ ಫೋಟೋಗಳನ್ನು ನಟಿ ರಾಧಿಕಾ ಪಂಡಿತ್ ಅವರು ಹಂಚಿಕೊಂಡಿದ್ದಾರೆ. ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನ ಆಚರಿಸಲಾಗುತ್ತದೆ. ಈ ವರ್ಷ ಜೂನ್ 18ರಂದು ಅಪ್ಪಂದಿರ ದಿನವನ್ನು ಸೆಲೆಬ್ರೇಟ್ ಮಾಡಲಾಗುತ್ತಿದೆ. ಸದ್ಯ ನಟಿ ರಾಧಿಕಾ ಪಂಡಿತ್ ಅವರು ವಿಶ್ವ ಅಪ್ಪಂದಿರ ದಿನದ ಪ್ರಯುಕ್ತ ಒಂದಷ್ಟು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ತಂದೆ ಕೃಷ್ಣ ಪ್ರಸಾದ್ ಪಂಡಿತ್ ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವವನ್ನು ಹೊಂದಿರುವ ನಟಿ ರಾಧಿಕಾ ಪಂಡಿತ್ ಅವರು, ‘ನಾನು ಯಾವಾಗಲೂ ಅಪ್ಪನ ಮಗಳು, ಎಲ್ಲ ವಿಚಾರಕ್ಕೂ ನಾನು ಅವರ ಬಳಿಯೇ ಓಡುತ್ತೇನೆ..’ ಎಂದು ಹೇಳಿಕೊಳ್ಳುತ್ತಾರೆ.
ಹಾಗೆಯೇ, ಪತಿ ಯಶ್ ಅವರ ಫೋಟೋಗಳನ್ನು ಕೂಡ ಈ ಸಂದರ್ಭದಲ್ಲಿ ಶೇರ್ ಮಾಡಿಕೊಂಡಿರುವ ರಾಧಿಕಾ, ‘ನಾನು ನನ್ನ ತಂದೆಯ ಜೊತೆಗೆ ಹೊಂದಿರುವಷ್ಟೇ ಬಾಂಡಿಂಗ್ ಅನ್ನು ಯಥರ್ವ್ ಮತ್ತು ಆಯ್ರಾ ಕೂಡ ಅವರ ತಂದೆಯೊಂದಿಗೆ ಹೊಂದಿರುವುದನ್ನು ನೋಡಲು ಖುಷಿಯಾಗುತ್ತದೆ’ ಎಂದು ಹೇಳಿಕೊಂಡಿದ್ದಾರೆ. ವಿಶ್ವ ಅಪ್ಪಂದಿರ ದಿನದಂದು ವಿಶೇಷ ಫೋಟೋಗಳನ್ನು ನಟಿ ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿದ್ದಾರೆ. ಪತಿ ಯಶ್ ಮತ್ತು ಮಕ್ಕಳಾದ ಆಯ್ರಾ & ಯಥರ್ವ ಹಾಗೂ ತಮ್ಮ ತಂದೆ, ತಾಯಿ, ಸಹೋದರನ ಜೊತೆಗಿರುವ ಅಪರೂಪದ ಫೋಟೋಗಳನ್ನು ರಾಧಿಕಾ ಶೇರ್ ಮಾಡಿಕೊಂಡಿದ್ದಾರೆ. ನಟ ಯಶ್ ಅವರು ಎಷ್ಟೇ ಬ್ಯುಸಿ ಇದ್ದರೂ, ಮಕ್ಕಳಿಗೆ ಯಾವಾಗಲೂ ಸಮಯವನ್ನು ಮೀಸಲು ಇಡುತ್ತಾರೆ. ಅವರ ಜತೆಗೆ ಹೆಚ್ಚು ಸಮಯ ಕಳೆಯುತ್ತಾರೆ.
