ಉದಯವಾಹಿನಿ, ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧ ದಂಪತಿಯಿಂದ ಸೈಬರ್ ಕಳ್ಳರು 4.79 ಕೋಟಿ ರೂ. ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ವಂಚನೆಗೊಳಗಾದವರನ್ನು ಮಂಜುನಾಥ್ ದಂಪತಿ ಹಾಗೂ ಆರೋಪಿಗಳನ್ನು ಈಶ್ವರ್ ಸಿಂಗ್, ನಾರಾಯಣ್ ಸಿಂಗ್ ಚೌಧರಿ ಎಂದು ಗುರುತಿಸಲಾಗಿದೆ. ಮಂಜುನಾಥ್ ನೈಜಿರೀಯಾದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿ ಇದೀಗ ನಿವೃತ್ತಿಯಾಗಿದ್ದಾರೆ. ಸೈಬರು ಕಳ್ಳರು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಓವರ್ ಡ್ಯೂ ಆಗಿದೆ ಎಂದು ದಂಪತಿಗೆ ಕರೆ ಮಾಡಿದ್ದಾರೆ. ಬಳಿಕ ನಿಮ್ಮ ಅಕೌಂಟ್‌ನಲ್ಲಿ ಮನಿ ಲಾಂಡರಿಂಗ್ ಆಗಿದೆ. ಇಡಿ, ಸಿಬಿಐನಲ್ಲಿ ನಿಮ್ಮ ವಿರುದ್ಧ ಕೇಸ್ ಆಗಿದೆ ಎಂದು ಹೆದರಿಸಿದ್ದಾರೆ.
ಜೊತೆಗೆ ನಿಮ್ಮನ್ನು ಅರೆಸ್ಟ್ ಮಾಡಿ, ತಿಹಾರ್ ಜೈಲಿಗೆ ಹಾಕುತ್ತೇವೆ ಎಂದು ನಕಲಿ ವಾರಂಟ್ ಕಳಿಸಿದ್ದಾರೆ.ದಂಪತಿಯನ್ನು ಹೆದರಿಸಿ ಹಂತ ಹಂತವಾಗಿ 4.79 ಕೋಟಿ ರೂ. ಸುಲಿಗೆ ಮಾಡಿದ್ದಾರೆ. ಈ ಕುರಿತು ದಂಪತಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಸೆನ್ ಪೊಲೀಸರು ಸದ್ಯ ಇಬ್ಬರನ್ನು ಬಂಧಿಸಿದ್ದಾರೆ.
