ಉದಯವಾಹಿನಿ, ನವದೆಹಲಿ: ಭಾರತ ಮತ್ತು ಕೆನಡಾವನ್ನು ಚೈತನ್ಯಶೀಲ ಪ್ರಜಾಪ್ರಭುತ್ವಗಳು ಎಂದು ಬಣ್ಣಿಸಿರುವ ವಿದೇಶಾಂಗ ಸಚಿವಾಲಯ, ಜಿ7 ಶೃಂಗಸಭೆಯ ಸಂದರ್ಭದಲ್ಲಿ ಉಭಯ ದೇಶಗಳ ಪ್ರಧಾನ ಮಂತ್ರಿಗಳ ನಡುವಿನ ಮುಂಬರುವ ಸಭೆಯು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮರುಸ್ಥಾಪಿಸಲು ಮಾರ್ಗಗಳನ್ನು ಅನ್ವೇಷಿಸಲು ಒಂದು ಪ್ರಮುಖ ಅವಕಾಶವನ್ನು ನೀಡುತ್ತದೆ ಎಂದು ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ತಮ್ಮ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಹೀಗೆ ಹೇಳಿದರು. ನಮ್ಮ ಪ್ರಧಾನಿಗೆ ಕಳೆದ ವಾರ ಕೆನಡಾ ಪ್ರಧಾನಿಯಿಂದ ಕರೆ ಬಂದಿತ್ತು. ಕರೆಯ ಸಮಯದಲ್ಲಿ, ಪ್ರಧಾನಿ ಮಾರ್ಕ್‌ ಕಾರ್ನಿ ಪ್ರಧಾನಿ (ನರೇಂದ್ರ ಮೋದಿ) ಅವರನ್ನು ಜಿ7 (ಸಭೆ)ಗೆ ಹಾಜರಾಗಲು ಆಹ್ವಾನಿಸಿದರು, ಮತ್ತು ನಿಮಗೆ ತಿಳಿದಿರುವಂತೆ, ಆಹ್ವಾನವನ್ನು ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು.

ಈ ಕರೆಯು ಭಾರತ-ಕೆನಡಾ ಸಂಬಂಧಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎಂಬುದರ ಕುರಿತು ಪ್ರತಿಬಿಂಬಿಸಲು ಅಥವಾ ಮಾತನಾಡಲು ಇಬ್ಬರು ಪ್ರಧಾನ ಮಂತ್ರಿಗಳಿಗೆ ಒಂದು ಸಂದರ್ಭವಾಗಿತ್ತು ಎಂದು ಎಂಇಎ ವಕ್ತಾರರು ಹೇಳಿದರು.ಈ ತಿಂಗಳ ಕೊನೆಯಲ್ಲಿ ಕೆನಡಾ ನಿರ್ಣಾಯಕ ಜಿ7 ಸಭೆಯನ್ನು ಆಯೋಜಿಸಲಿದೆ.ಗ್ರೂಪ್‌ ಆಫ್‌ ಸೆವೆನ್‌ (7) ಕೆನಡಾ, ಫ್ರಾನ್‌್ಸ, ಜರ್ಮನಿ, ಇಟಲಿ, ಜಪಾನ್‌, ಅಮೆರಿಕ ಮತ್ತು ಯುಕೆ ಸೇರಿದಂತೆ ವಿಶ್ವದ ಏಳು ಮುಂದುವರಿದ ಆರ್ಥಿಕತೆಗಳನ್ನು ಹಾಗೂ ಯುರೋಪಿಯನ್‌ ಒಕ್ಕೂಟವನ್ನು ಒಳಗೊಂಡಿದೆ.

Leave a Reply

Your email address will not be published. Required fields are marked *

error: Content is protected !!