ಉದಯವಾಹಿನಿ, ನವದೆಹಲಿ: ಕೇಂದ್ರ ಸರ್ಕಾರ ಕಡೆಗೂ ರಾಹುಲ್ ಗಾಂಧಿಯವರ ಹೋರಾಟಕ್ಕೆ ಸ್ಪಂದಿಸಿ ಜನಗಣತಿ ಅಧಿಸೂಚನೆ ಆದೇಶ ಹೊರಡಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಯಾರೇ ಆದರೂ ಪ್ರಜಾಪ್ರಭುತ್ವದಲ್ಲಿ ಜನರ ಸ್ಥಿತಿಗತಿ ನೋಡಿಲ್ಲ ಎಂದರೆ ಕಾರ್ಯಕ್ರಮ ಕೊಡೋದು ಕಷ್ಟ. ರಾಹುಲ್ ಗಾಂಧಿಯವರ ನಿರಂತರ ಹೋರಾಟದ ಉದ್ದೇಶದ ಫಲವಾಗಿ ಕೇಂದ್ರ ಅಧಿಸೂಚನೆ ಹೊರಡಿಸಿದೆ ಅದಕ್ಕೆ ಸ್ವಾಗತ ಎಂದಿದ್ದಾರೆ.
1931ರಲ್ಲಿ ಜಾತಿಯನ್ನ ಸೇರಿಸಿದ್ದರು. ಸ್ವತಂತ್ರದ ಬಳಿಕ ಮೊದಲ ಬಾರಿಗೆ ಜಾತಿಯನ್ನ ಸೇರಿಸೋದು ಬಹಳ ಮುಖ್ಯವಾದದ್ದು, ರಾಹುಲ್‌ಯವರ ಬೇಡಿಕೆ ಕೂಡ ಅದೇ ಆಗಿತ್ತು. ಸ್ವತಂತ್ರದ ಬಳಿಕ ಯಾವ ಸ್ಥಿತಿಗತಿಯಲ್ಲಿದ್ದಾರೆ ಅನ್ನೋದು ತಿಳಿಯಲಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಜಾತಿಗಣತಿ ಜಾರಿಯಾದರೆ ಒಳ್ಳೆಯದು ಎಂದು ಹೇಳಿದ್ದಾರೆ.
ಜಾತಿಗಣತಿ (Caste Census) ತಡೆಗೆ ಪ್ರಬಲ ಸಮುದಾಯ ಕಾರಣ ಎನ್ನುವ ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿಚಾರವಾಗಿ, ಕರ್ನಾಟಕ ರಾಜ್ಯದ ವಿಚಾರದಲ್ಲಿ ನಮಗೆ ಹೊಸದಲ್ಲ. 1960ರಲ್ಲಿ ನಾಗನಗೌಡ ಸಮಿತಿಯಿಂದ ಹಿಡಿದು ಹಾವನೂರ್, ವೆಂಕಟಸ್ವಾಮಿ, ಚಿನ್ನಪ್ಪ ರೆಡ್ಡಿ ಎಂಬೆಲ್ಲಾ ಸಮುದಾಯ ಇದ್ದವು. ಇದು ಹೊಸದೇನಲ್ಲ. ಎಲ್ಲಾ ಸಂದರ್ಭದಲ್ಲಿ ಕೂಡ ಕೆಲ ಮೇಲ್ಜಾತಿಯವರು ವಿರೋಧ ಮಾಡಿರೋದು ನೋಡಿಕೊಂಡು ಬಂದಿದ್ದೇವೆ ಎಂದಿದ್ದಾರೆ.
