ಉದಯವಾಹಿನಿ, ಬೆಂಗಳೂರು: ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಮಲೇಶಿಯಾ ದೇಶದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಕಾಮನ್‌ವೆಲ್ತ್ ಸಂಸದೀಯ ಸಂಘ, ವಿಧಾನ ಸಭೆಯ ಸಭಾಧ್ಯಕ್ಷರು ಹಾಗೂ ಕರ್ನಾಟಕ ಶಾಖೆಯ ಜಂಟಿ ಅಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಜನಪ್ರತಿನಿಧಿಗಳ ಸಭೆಯ (ದಿವಾನ್ ರಖ್ಯತ್) ಸಭಾಧ್ಯಕ್ಷರು ಮತ್ತು ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್, ಮಲೇಶಿಯಾದ ಜಂಟಿ ಅಧ್ಯಕ್ಷರಾದ ಡಾ.ಜೋಹರಿ ಬಿನ್ ಅಬ್ದುಲ್ ಅವರನ್ನು ಕೌಲಾಲಾಂಪುರದಲ್ಲಿರುವ ಸಂಸತ್ ಭವನದಲ್ಲಿ ಭೇಟಿ ಮಾಡಿದರು.ಈ ಸಂದರ್ಭದಲ್ಲಿ ಸಭಾಪತಿ ಯು.ಟಿ.ಖಾದರ್ ಅವರು ಸಂಸದೀಯ ವ್ಯವಹಾರಗಳು ಹಾಗೂ ಪ್ರಜಾಪ್ರಭುತ್ವ ತತ್ವಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿದರು.
