
ಉದಯವಾಹಿನಿ, ಬೆಂಗಳೂರು: ನಗರದ ಬೇಗೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿವೆ.ಅಪಾರ್ಟ್ಮೆಂಟ್‌ನಲ್ಲಿ ಇಂಗುಗುಂಡಿ ತೆಗೆಯುತ್ತಿರುವಾಗ ಅಸ್ಥಿಪಂಜರಗಳು ಪತ್ತೆಯಾಗಿವೆ. ಸಿಕ್ಕಿರುವ ಎರಡು ಅಸ್ಥಿಪಂಜರಗಳು ಒಂದೇನಾ? ಅಥವಾ ಬೇರೆ ಬೇರೆನಾ…? ಎಂದು ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಸದ್ಯ ಪೊಲೀಸರು ಅಸ್ಥಿಪಂಜರಗಳನ್ನ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, 2012, 2013ನೇ ಸಾಲಿನಲ್ಲಿ ಮೃತಪಟ್ಟಿರುವುದಾಗಿ ತಜ್ಞರು ಮಾಹಿತಿ ನೀಡಿದ್ದಾರೆ. ಈಗಾಗಲೇ ಅಸ್ಥಿಪಂಜರಗಳನ್ನು FSLಗೆ ಕಳುಹಿಸಲಾಗಿದ್ದು, ವರದಿ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ. ಸದ್ಯ ಘಟನೆ ಸಂಬಂಧ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಬೇಗೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
