ಉದಯವಾಹಿನಿ, ಮುಂಬೈ: ವೃದ್ಧಾಪ್ಯ ತಡೆಯುವ ಚಿಕಿತ್ಸೆಯೇ ನಟಿ ಶೆಫಾಲಿ ಜರಿವಾಲಾಗೆ ಮುಳುವಾಯ್ತಾ ಎಂಬ ಪ್ರಶ್ನೆ ಎದ್ದಿದೆ. ಹೌದು. 42 ವರ್ಷದ ನಟಿಯ ಹಠಾತ್ ಸಾವಿನ ಬಗ್ಗೆ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯ ವೇಳೆ ಹಲವಾರು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಖಾಲಿ ಹೊಟ್ಟೆಯಲ್ಲಿ ಮಾತ್ರೆ ಸೇವಿಸಿದ್ದರಿಂದ ಅವರ ಸ್ಥಿತಿ ಹದಗೆಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವೃದ್ಧಾಪ್ಯ ತಡೆಯುವ ಚಿಕಿತ್ಸೆ ಪಡೆಯುತ್ತಿದ್ದ ಶೆಫಾಲಿ ಏಳೆಂಟು ವರ್ಷಗಳಿಂದ ಔಷಧಿಗಳನ್ನು ತಜ್ಞರ ಮಾರ್ಗದರ್ಶನದಲ್ಲಿ ಸೇವಿಸುತ್ತಿದ್ದರು. ಈ ಸಂಬಂಧ ಪ್ರತಿ ತಿಂಗಳು ಈ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ಶುಕ್ರವಾರ ನಟಿ ಶೆಫಾನಿ ಮನೆಯಲ್ಲಿ ಪೂಜೆ ಆಯೋಜನೆಗೊಂಡಿತ್ತು. ಪೂಜೆ ಇರುವ ಕಾರಣ ಶೆಫಾನಿ ಉಪವಾಸ ವ್ರತ ಕೈಗೊಂಡಿದ್ದರು. ಆದರೆ ಅಂದು ವೃದ್ಧಾಪ್ಯ ತಡೆಯುವ ಔಷಧಿಯನ್ನು ಸೇವಿಸಿದ್ದರು. ರಾತ್ರಿ 10-11 ಗಂಟೆ ನಡುವೆ ಇದ್ದಕ್ಕಿದ್ದಂತೆ ಶೆಫಾಲಿ ಆರೋಗ್ಯದಲ್ಲಿ ಏರುಪೇರಾಗತೊಡಗಿತು. ರಕ್ತದೊತ್ತಡ ತೀವ್ರವಾಗಿ ಕಡಿಮೆಯಾಗಿ ದೇಹ ನಡುಗಲು ಆರಂಭಿಸಿ ಕೆಲ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಆಗ ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ನಟಿ ಪಡೆಯುತ್ತಿದ್ದ ವಿಟಮಿನ್ ಟಾಬ್ಲೆಟ್, ಗ್ಯಾಸ್ಟ್ರಿಕ್ ಮಾತ್ರೆ ಸೇರಿದಂತೆ ವಿವಿಧ ಔಷಧಿಗಳನ್ನು ಸಂಗ್ರಹಿಸಿದೆ. ಮರಣೋತ್ತರ ಪರೀಕ್ಷೆ ವರದಿ ಇನ್ನೂ ಪೊಲೀಸರ ಕೈ ಸೇರಿಲ್ಲ. ಮರಣೋತ್ತರ ಪರೀಕ್ಷೆ ವರದಿ ಮತ್ತು ಔಷಧಿಗಳ ಪರೀಕ್ಷೆಗಳ ವರದಿಯ ಬಳಿಕ ಶೆಫಾಲಿ ಜರಿವಾಲಾ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Leave a Reply

Your email address will not be published. Required fields are marked *

error: Content is protected !!