ಉದಯವಾಹಿನಿ, ಬೆಂಗಳೂರು: ರಾಜ್ಯಕ್ಕೆ ಬಂದಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿಗೆ ನಾನು ಸಮಯ ಕೇಳಿದ್ದೇನೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತಾಡಿದ ಅವರು, ಸುರ್ಜೇವಾಲಾ ಭೇಟಿಗೆ ಸಮಯ ಕೇಳಿದ್ದೇನೆ. ಮಂಗಳವಾರ ಮಧ್ಯಾಹ್ನ ಬರುವಂತೆ ಸುರ್ಜೇವಾಲಾ ತಿಳಿಸಿದ್ದಾರೆ. ಇದೇ ವೇಳೆ, ತಮ್ಮ ಭೇಟಿ ವೈಯಕ್ತಿಕ ಎಂದು ಹೇಳುವ ಮೂಲಕ ಕಾರಣ ತಿಳಿಸಲು ನಿರಾಕರಿಸಿದ್ದಾರೆ.
ಸುರ್ಜೇವಾಲಾರಿಂದ ಶಾಸಕರ ಅಹವಾಲು ವಿಚಾರವಾಗಿ, ಪಕ್ಷ ಸಂಘಟನೆ ಬಗ್ಗೆ ಶಾಸಕರ ಜೊತೆ ಮಾತಾಡಬಹುದು. ಶಾಸಕರಿಗೆ ಬಹಿರಂಗವಾಗಿ ಮಾತಾಡದಂತೆ ಕಟ್ಟುನಿಟ್ಟಾಗಿ ಹೇಳಬಹುದು. ಜಿ.ಪಂ, ತಾ.ಪಂ ಚುನಾವಣೆ ಬರ್ತಿದೆ, ಅದರ ಬಗ್ಗೆ ಮಾತಾಡಬಹುದು. ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಆದಾಗ, ಕೆಲವು ಸಂದರ್ಭದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡ್ತಾರೆ. ರಾಜ್ಯಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಆದಾಗ ಸರಿಪಡಿಸ್ತಾರೆ. ಹಿಂದೆಯೂ ಬಂದು ಇಲಾಖಾ ಪ್ರಗತಿ ಬಗ್ಗೆ ಹೈಕಮಾಂಡ್‌ನವರು ಬಂದು ಮಾಹಿತಿ ಪಡೀತಿದ್ದರು. ನಮಗೆಲ್ಲ ಮಾರ್ಗದರ್ಶನ ಮಾಡೋದೇ ಹೈಕಮಾಂಡ್ ಎಂದು ತಿಳಿಸಿದ್ದಾರೆ.
