ಉದಯವಾಹಿನಿ, ಲಕ್ನೋ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೂಪರ್ ಹೀರೋ ಯಶ್ ದಯಾಳ್ ರಿಯಲ್ ಲೈಫ್‌ನಲ್ಲಿ ವಿಲನ್ ಆದ್ರಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ. ಹೌದು. 2025ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸ್ಟಾರ್ ವೇಗಿ ಯಶ್ ದಯಾಳ್ ) ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಬೆನ್ನಲ್ಲೇ ದೂರು ದಾಖಲಿಸಿದ್ದ ಗಾಜಿಯಾಬಾದ್ ಮಹಿಳೆಯಿಂದ ಹೊಸ ಆರೋಪ ಕೇಳಿಬಂದಿದೆ.
ನಾನು ಯಶ್ ದಯಾಳ್ ಅವರ ಮನೆಯಲ್ಲಿ 15 ದಿನಗಳ ಕಾಲ ತಂಗಿದ್ದೆ. ಯಶ್ ನನ್ನನ್ನ ಊಟಿ ಪ್ರವಾಸಕ್ಕೂ ಕರೆದುಕೊಂಡು ಬಂದಿದ್ದರು. ಹಲವು ಬಾರಿ ಅವರ ಮನೆಗೆ ಹೋಗಿದ್ದೆ, ಕುಟುಂಬದೊಂದಿಗೆ ಸಮಯ ಕಳೆದಿದ್ದೆ. ಕಳೆದ 5 ವರ್ಷಗಳಿಂದ ದಯಾಳ್ ಜೊತೆ ಸಂಬಂಧ ಹೊಂದಿದ್ದು, ದಯಾಳ್ ಮದುವೆಯಾಗುವುದಾಗಿ ನಂಬಿಸಿದ್ದರು. ನನ್ನನ್ನು ನಿಮ್ಮ ಭಾವಿ ಸೊಸೆ ಎಂದು ಅವರ ಕುಟುಂಬಕ್ಕೆ ಪರಿಚಯಿಸಿದ್ದರು. ಇದರಿಂದ ಮದುವೆಯಾಗುತ್ತಾರೆ ಅನ್ನೋ ಭರವಸೆ ಇತ್ತು. ಆದರೆ ನನಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
