ಉದಯವಾಹಿನಿ, ಕುನ್ಮಿಂಗ್: ಚೀನಾದ ಕುನ್ಮಿಂಗ್‌ನಲ್ಲಿ ಇತ್ತೀಚೆಗೆ ನಡೆದ ಚೀನಾ-ದಕ್ಷಿಣ ಏಷ್ಯಾ ಎಕ್ಸ್‌ಪೋ ಮತ್ತು ಚೀನಾ-ದಕ್ಷಿಣ ಏಷ್ಯಾ ಸಹಕಾರ ಸಮ್ಮೇಳನದ ಸಂದರ್ಭದಲ್ಲಿ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ತ್ರಿಪಕ್ಷೀಯ ಸಭೆ ನಡೆದಿದೆ. ಸಭೆಯಲ್ಲಿ ಸೌತ್ ಏಷಿಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೋಆಪರೇಷನ್ ಬದಲಿಗೆ ಹೊಸ ಒಕ್ಕೂಟ ಸ್ಥಾಪಿಸುವ ಬಗ್ಗೆ ಚರ್ಚೆ ನಡೆದಿದೆ.
ಸಾರ್ಕ್, ದಕ್ಷಿಣ ಏಷ್ಯಾದ ಎಂಟು ರಾಷ್ಟ್ರಗಳನ್ನು ಒಳಗೊಂಡಿರುವ ಪ್ರಾದೇಶಿಕ ಸಂಘಟನೆಯಾಗಿದೆ. ಭಾರತ (India), ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಆಫ್ಘಾನಿಸ್ತಾನವನ್ನು ಒಳಗೊಂಡಿದೆ. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಭೌಗೋಳಿಕ-ರಾಜಕೀಯ ಘರ್ಷಣೆಯಿಂದಾಗಿ, 2016ರಿಂದ ಸಾರ್ಕ್‌ನ ಶೃಂಗಸಭೆಗಳು ಸ್ಥಗಿತಗೊಂಡಿವೆ.
ಪ್ರಾದೇಶಿಕ ಏಕೀಕರಣ ಮತ್ತು ಸಂಪರ್ಕಕ್ಕಾಗಿ ಹೊಸ ಸಂಘಟನೆಯ ಅಗತ್ಯವಿದೆ ಎಂದು ಪಾಕಿಸ್ತಾನ ಮತ್ತು ಚೀನಾ (China) ಎರಡೂ ಸಭೆಯಲ್ಲಿ ಮನವರಿಕೆ ಮಾಡಿವೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಹೇಳಿದೆ. ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಸಾರ್ಕ್ ಸದಸ್ಯರು ಹೊಸ ಗುಂಪಿನ ಭಾಗವಾಗುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
