ಉದಯವಾಹಿನಿ, ನವದೆಹಲಿ: ಪಾಕ್ ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ (Social Media) ಖಾತೆಗಳ ನಿರ್ಬಂಧಕ್ಕೆ ಒಂದು ದಿನ ತೆರವು ನೀಡಿದ ಬಳಿಕ ಇದೀಗ ಮತ್ತೆ ಭಾರತದಲ್ಲಿ ನಿಷೇಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಭಯೋತ್ಪಾದಕರ ಗುಂಡಿಗೆ ಹತರಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತ `ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತ್ತು, ಈ ಕಾರ್ಯಾಚರಣೆಯನ್ನು ಖಂಡಿಸಿದ ಕೆಲವು ಪಾಕಿಸ್ತಾನಿ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು.
ಬುಧವಾರ ಕೆಲವು ಪಾಕಿಸ್ತಾನಿ ಸೆಲೆಬ್ರಿಟಿಗಳ ಇನ್‌ಸ್ಟಾಗ್ರಾಮ್ ಖಾತೆಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು. ಇದರಿಂದಾಗಿ ಸಬಾ ಕಮರ್, ಮಾವ್ರಾ ಹೊಕೇನ್, ಆಹದ್ ರಜಾ ಮಿರ್, ಯುಮ್ನಾ ಝೈದಿ ಮತ್ತು ದಾನಿಶ್ ತೈಮೂರ್, ಜೊತೆಗೆ ಹಮ್ ಟಿವಿ, ಎಆರ್‌ವೈ ಡಿಜಿಟಲ್ ಮತ್ತು ಹರ್ ಪಾಲ್ ಜಿಯೋನಂತಹ ಯೂಟ್ಯೂಬ್ ಚಾನೆಲ್‌ಗಳು ಭಾರತದಲ್ಲಿ ಕಾಣಿಸಲಾರಂಭಿಸಿದ್ದವು. ಇದರಿಂದಾಗಿ ಸರ್ಕಾರ ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಂಡಿದೆ ಎಂದು ಊಹಾಪೋಹಕ್ಕೆ ಕಾರಣವಾಗಿತ್ತು.
