ಉದಯವಾಹಿನಿ, ಜೈಪುರ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಧಿಕಾರಿ ಆಗಬೇಕು ಅಂದ್ರೆ ವರ್ಷಾನುಗಟ್ಟಲೆ ತಪಸ್ಸಿನಂತೆ ಕುಳಿತು ಓದುತ್ತಾರೆ. ಪರೀಕ್ಷೆ ಬರೆದು, ಸಂದರ್ಶನ ಎದುರಿಸಲು ಇನ್ನಿಲ್ಲದ ತರಬೇತಿ ಪಡೆಯುತ್ತಾರೆ. ಆದ್ರೆ ಇಲ್ಲೊಬ್ಬಳು ಐನಾತಿ ಹೆಣ್ಣು ಪರೀಕ್ಷೆಯಲ್ಲಿ ಫೇಲ್ ಆಗಿದ್ದರೂ 2 ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದಾಳೆ. ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಅಂತ ಹೇಳ್ಕೊಂಡು ರಾಜಸ್ಥಾನ ಪೊಲೀಸ್ ಅಕಾಡೆಮಿ ಟ್ರೈನಿಂಗ್‌ಗೆ ಹಾಜರಾಗಿದ್ದಾಳೆ. ಹಿರಿಯ ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಂಡು ತಾನು ಪೊಲೀಸ್ ಅಧಿಕಾರಿ ಅಂತಲೇ ಬಿಲ್ಡಪ್ ಕೊಡ್ತಿದ್ದ ಮಹಿಳೆ ಈಗ ಸಿಕ್ಕಿಬಿದ್ದಿದ್ದಾಳೆ.
ಬಂಧಿತ ಆರೋಪಿ ಮಹಿಳೆಯನ್ನ ಮೋನಾ ಬುಗಾಲಿಯಾ ಅಲಿಯಾಸ್ ಮೂಲಿ ದೇವಿ ಎಂದು ಗುರುತಿಸಲಾಗಿದೆ. 2023ರಲ್ಲಿ ಈಕೆ ವಿರುದ್ಧ ದೂರು ದಾಖಲಾದ ಬಳಿಕ ಪರಾರಿಯಾಗಿದ್ದಳು. ಆದ್ರೆ ಈ ವಾರದ ಆರಂಭದಲ್ಲಿ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಆಕೆಯನ್ನ ಬಂಧಿಸಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
