ಉದಯವಾಹಿನಿ,ನ್ಯೂಯಾರ್ಕ್‌: ಅಮೆರಿಕನ್‌ ವಿರೋಧಿ ನೀತಿಗಳೊಂದಿಗೆ ಹೊಂದಿಕೆಯಾಗುವ ದೇಶಗಳ ಮೇಲೆ ಹೆಚ್ಚುವರಿಯಾಗಿ ಶೇ.10 ರಷ್ಟು ಸುಂಕವನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಬೆದರಿಕೆ ಹಾಕಿದ್ದಾರೆ. ಬ್ರಿಕ್‌್ಸ ಬಣವು ಟ್ರಂಪ್‌ ಅವರನ್ನು ಹೆಸರಿಸದೆ ಸುಂಕ ಹೆಚ್ಚಳವನ್ನು ಖಂಡಿಸಿದ ನಂತರ ಅವರ ಹೇಳಿಕೆಗಳು ಬಂದಿವೆ. ಇಂದು 17 ನೇ ಬ್ರಿಕ್ಸ್ ಶೃಂಗಸಭೆಗಾಗಿ ಬ್ರಿಕ್ಸ್ ನಾಯಕರು ಬ್ರೆಜಿಲ್‌ನಲ್ಲಿ ಸಭೆ ಸೇರುತ್ತಿದ್ದಾರೆ.ಬ್ರಿಕ್‌್ಸನ ಅಮೆರಿಕನ್‌ ವಿರೋಧಿ ನೀತಿಗಳೊಂದಿಗೆ ತಮನ್ನು ಹೊಂದಿಸಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ ಶೇ. 10 ರಷ್ಟು ಸುಂಕ ವಿಧಿಸಲಾಗುತ್ತದೆ. ಈ ನೀತಿಗೆ ಯಾವುದೇ ವಿನಾಯಿತಿ ಇರುವುದಿಲ್ಲ.
ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು! ಎಂದು ಟ್ರಂಪ್‌ ತಡರಾತ್ರಿ ಟ್ರೂತ್‌ ಸೋಷಿಯಲ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.ಮೂಲತಃ ಬ್ರೆಜಿಲ್‌‍, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿದ್ದ ಬ್ರಿಕ್ಸ್ , 2024 ರಲ್ಲಿ ಈಜಿಪ್ಟ್‌‍, ಇಥಿಯೋಪಿಯಾ, ಇರಾನ್‌ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್‌್ಸ ಅನ್ನು ಸೇರಿಸಲು ವಿಸ್ತರಿಸಿತು, ಇಂಡೋನೇಷ್ಯಾ 2025 ರಲ್ಲಿ ಸೇರುತ್ತದೆ.

ಇಂದಿನಿಂದ ವಿವಿಧ ದೇಶಗಳಿಗೆ ಸುಂಕ ಮತ್ತು ಒಪ್ಪಂದಗಳ ಕುರಿತು ಯುಎಸ್‌‍ ಪತ್ರಗಳನ್ನು ಕಳುಹಿಸುತ್ತದೆ ಎಂದು ಟ್ರಂಪ್‌ ಪ್ರತ್ಯೇಕ ಪೋಸ್ಟ್‌ನಲ್ಲಿ ಹೇಳಿದ್ದಾರೆ.ವಿಶ್ವದಾದ್ಯಂತದ ವಿವಿಧ ದೇಶಗಳೊಂದಿಗೆ ಯುನೈಟೆಡ್‌ ಸ್ಟೇಟ್ಸ್ ಸುಂಕ ಪತ್ರಗಳು ಅಥವಾ ಡೀಲ್‌ಗಳನ್ನು ಇಂದಿನಿಂದ ತಲುಪಿಸಲಾಗುವುದು ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು! ಡೊನಾಲ್‌್ಡ ಜೆ ಟ್ರಂಪ್‌‍, ಯುನೈಟೆಡ್‌ ಸ್ಟೇಟ್ಸ್ ಆಫ್‌ ಅಮೇರಿಕಾ ಅಧ್ಯಕ್ಷರು ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!